
ಅಳದಂಗಡಿ :ಅಳದಂಗಡಿಯಲ್ಲಿ ನೂತನ ಸೌಮ್ಯ ರೆಸಿಡೆನ್ಸಿ ಬೋರ್ಡಿಂಗ್ & ಲಾಡ್ಜಿಂಗ್ ಮತ್ತು ರೀಜೇಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆ ಮಾ.29 ರಂದು ನಡೆಯಿತು
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರು ಶಿವಪ್ರಸಾದ್ ಅಜಿಲರು ದೀಪ ಪ್ರಜ್ವಲನೆಯನ್ನು ನೆರವೇರಿಸಿದರು. ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ರೆಸ್ಟೋರೆಂಟ್ ಉದ್ಘಾಟನೆಯನ್ನು ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಅಳದಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಅಳದಂಗಡಿ ಸಂತೋಷ್‌ಫರ್ ಕಾಂಪ್ಲೆಕ್ಸ್ ಮಾಲಕ ಎಡ್ವರ್ಡ್ ಪಾಯಸ್, ಮಂಗಳೂರು ನಿವೃತ್ತ ಅಬಕಾರಿ ಅಧೀಕ್ಷಕ ಎಂ. ಸದಾಶಿವ ಹೆಗ್ಡೆ, ಅಳದಂಗಡಿ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಶಿವ ಭಟ್ ಭಾಗವಹಿಸಿದ್ದರು.

ಮಾಲಕ ಸುಂದರ ಹೆಗ್ಡೆ B.E. ಮತ್ತು ಶ್ರೀಮತಿ ಸೌಮ್ಯ ಹೆಗ್ಡೆ ಮನೆಯವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಕಾರ್ಯಕ್ರಮದ ಮೊದಲು ವೈದಿಕ ಕಾರ್ಯಕ್ರಮಗಳು, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.