ಮೊಗ್ರು ಮನ್ಕುಡೆ ತರವಾಡು ದೈವಗಳ ಕಾಲಾವಧಿ ಸೇವೆ

0

ಮೊಗ್ರು : ಇಲ್ಲಿಯ ಮೊಗ್ರು ಮನ್ಕುಡೆ ಕುಟುಂಬದ (ತರವಾಡು) ಮನೆಯಲ್ಲಿ ಮಾ.27 ರಂದು ಧರ್ಮ ದೈವ ಮೂರ್ತಿಣ್ಣಾಯ ಪಂಜುರ್ಲಿ, ಗುಳಿಗ ದೈವಗಳಿಗೆ ಕಾಲಾವಧಿ ವಿಶೇಷ ಪರ್ವ ಸೇವೆ ನಡೆಯಿತು. ಹಾಗೂ ಕಲ್ಲುರ್ಟಿ ದೈವದ ಆಗೇಲು ಸೇವೆ ಮತ್ತು ಕಾಲಾವಧಿ ಗಗ್ಗರ ಸೇವೆ ಜರುಗಿತು.


ಈ ಸಂದರ್ಭದಲ್ಲಿ ಮೊಗ್ರು ದೇವಸ್ಯ ಗುತ್ತು ಚಂದ್ರಹಾಸ ಗೌಡ, ಅಂತರ ಬಾರಿಕೆ ಮನೋಹರ ಗೌಡ, ನಾೈಮಾರು ಗೌಡತ್ತಿಗೆ ಮನೆ ಕೃಷ್ಣಪ್ಪ ಗೌಡ ಮತ್ತು ದೈವದ ಮಧ್ಯಸ್ಥ ಅರ್ಬಿ ಜಗದೀಶ್ ಗೌಡ ಉಪಸ್ಥಿತರಿದ್ದರು.


ಕಲಾಯಿತೊಟ್ಟು, ಕೊಯ್ಯೂರು, ಕಣಿಯೂರು, ಬಂದಾರು, ಬಾರ್ಯ, ನೆರಿಯ, ಪುತ್ತೂರು ಕೆಮ್ಮಾಯಿ ಕುಟುಂಬದ ಮುಖ್ಯಸ್ಥರು, ಸದಸ್ಯರು ಭಾಗವಹಿಸಿ ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here