p>
ನಾರಾವಿ: ಇಲ್ಲಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹತ್ತಿರ ಇರುವ ನೂತನ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಸಾಯಿನಿಧಿ ಟೆಕ್ಸ್ ಟೈಲ್ಸ್ ಸಿಲ್ಕ್ಸ್ ಮಾ.27 ರಂದು ಶುಭಾರಂಭಗೊಂಡಿತು.
ಸೋಲೂರು ಮಠ ಬೆಂಗಳೂರು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಾರಾವಿ ಸಂತ ಅಂತೋಣಿ ಚರ್ಚ್ ಧರ್ಮಗುರು ವಂ. ಫಾ| ಸೈಮನ್ ಡಿಸೋಜಾ ಬಲ್ಯೊಟ್ಟು ಮದ್ರಸಾ ಹೊಸ್ಮಾರ್ ಧರ್ಮಗುರು ಷರೀಫ್ ಮದನಿ ಆಶೀರ್ವಚನ ನೀಡಿದ್ದರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ವಸಂತ ಬಂಗೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಡಮಣಿತ್ತಾಯ ದೈವಸ್ಥಾನದ ಮನೆತನದವರಾದ ಚಂದ್ರರಾಜ್ ಬುಣ್ಣು, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನ ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ನಾರಾವಿ ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಗೌರವಾಧ್ಯಕ್ಷ ರವೀಂದ್ರ ಪೂಜಾರಿ, ಉದ್ಯಮಿ ಎನ್ ಪ್ರೇಮ್ ಕುಮಾರ್, ಮೊದಲಾದ ಗಣ್ಯರು ಭಾಗವಹಿಸಿದ್ದರು.
ರಮೇಶ್ ಸುವರ್ಣ ದಂಪತಿ ಮತ್ತು ಮಕ್ಕಳು ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
p>