ಮಲ್‌ಜ‌ಅ ದ‌ಅವಾ ಕೇಂದ್ರದಿಂದ ಒಂದು ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

0

ಉಜಿರೆ : ಕಳೆದ 14 ವರ್ಷಗಳಿಂದ ಉಜಿರೆ ಕಾಶಿಬೆಟ್ಟು ಕೇಂದ್ರದಲ್ಲಿ ಉಜಿರೆ ತಂಙಳ್ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮಲ್‌ಜ‌ಅ ದ‌ಅವಾ ಮತ್ತು ರಿಲೀಫ್ ಸೆಂಟರ್ ವತಿಯಿಂದ 1 ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಆಹಾರ ವಸ್ತುಗಳನ್ನೊಳಗೊಂಡ ಕಿಟ್ ವಿತರಣೆ ನಡೆಯಿತು.

ತಾಲೂಕು ಮತ್ತು ತಾಲೂಕಿನ ಗಡಿ ಪ್ರದೇಶದಲ್ಲಿ ಒಳಗೊಂಡಂತೆ ಒಟ್ಟು 11 ಕೇಂದ್ರಗಳಲ್ಲಿ ಫಲಾನುಭವಿಗಳನ್ನು ಸಂಯೋಜಿಸಿ ವಿತರಣೆ ನಡೆಸಲಾಯಿತು.

ಮುಂಡಾಜೆ ಕೇಂದ್ರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ ಪಿಆರ್‌ಒ ಸೆಬಾಸ್ಟಿಯನ್ ಪಿ.ಸಿ, ಶ್ರೀ ಶಾಸ್ಥಾ ವೆಲ್ ರಿಂಗ್ ವರ್ಕ್ಸ್ ಮಾಲಿಕ ಶಿಜು ಕೇರಳ, ಎಸ್‌ಎಮ್‌ಎ ಉಜಿರೆ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ನೆಕ್ಕರೆ ಮುಂಡಾಜೆ ಕಿಟ್ ಹಸ್ತಾಂತರಿಸಿದರು.
ಎಸ್‌ವೈಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು.


ಮುಂಡಾಜೆ, ಉಜಿರೆ, ಲಾಯಿಲ, ಬದ್ಯಾರ್,ಗುರುವಾಯನಕೆರೆ, ಮದ್ದಡ್ಕ, ಕಲ್ಲೇರಿ, ಸರಳಿಕಟ್ಟೆ, ನೆಲ್ಯಾಡಿ, ಉಪ್ಪಿನಂಗಡಿ, ಆತೂರು ಕೇಂದ್ರಗಳಲ್ಲಿ 110 ಕ್ಕೂ ಅಧಿಕ ಮೊಹಲ್ಲಾಗಳ ಅರ್ಹ ಕುಟುಂಬಗಳಿಗೆ ಎರಡು ದಿನಗಳಲ್ಲಿ ವಿತರಣೆಗಳು ನಡೆದವು.


ಮಲ್‌ಜ‌ಅ ಸಂಸ್ಥೆಯ ಪಿಆರ್‌ಒ ಶರೀಫ್ ಬೆರ್ಕಳ, ಕಾರ್ಯಕರ್ತರಾದ ರಝಾಕ್, ಸುಲೈಮಾನ್ ಕುಂಟಿನಿ, ಅಬೂಬಕ್ಕರ್ ಹಾಜಿ, ಮುಹಮ್ಮದ್ ಎಂ.ಹೆಚ್, ಹಕೀಂ ಮದನಿ ಬೆಳಾಲು, ರಫೀಕ್ ಮದನಿ, ಆಸಿಫ್ ಅಹ್‌ಸನಿ, ಅಶ್ರಫ್ ಸಖಾಫಿ, ನವಾಝ್ ಅಹ್‌ಸನಿ, ಇಲ್ಯಾಸ್ ಮತ್ತು ರಫೀಕ್ ಕುಪ್ಪೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here