ನಾರಾವಿ: ದಾನಶಾಲೆ ಮಹಾವೀರ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯೊಂದಿಗೆ ಬೆಳ್ತಂಗಡಿ, ಉಜಿರೆ ಮತ್ತು ಬಳಂಜ ಸೇರಿದಂತೆ ಈಗಾಗಲೇ 4 ಶಾಖೆಗಳನ್ನು ಹೊಂದಿರುವ ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ. ಇದರ 5ನೇ ಶಾಖೆಯನ್ನು ಹೊಸ್ಮಾರಿನ ವಿಜಯ ಕಾಂಪ್ಲೆಕ್ಸ್ ನಲ್ಲಿ ಮಾ. 20ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತದೆ. ಸಹಕಾರಿ ಸಂಘಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ದೊರೆಯುವುದರ ಜತೆಗೆ ಗ್ರಾಹಕರಿಗೆ ಕ್ಷಿಪ್ರ ಸೇವೆ ಲಭ್ಯವಾಗುತ್ತಿದೆ. ಆದುದರಿಂದ ಜನರು ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಸಹಕಾರಿ ಸಂಘಗಳನ್ನೇ ಅವಲಂಬಿಸುತ್ತಿದ್ದಾರೆ ಎಂದು ಹೊಸ್ಮಾರು ಉದ್ಯಮಿ ಪ್ರೇಮ್ ಕುಮಾರ್ ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕ ನೇಮಿರಾಜ ಆರಿಗೆ ಅವರು ಮಾತನಾಡಿ, ಗ್ರಾಹಕರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಸಂಘದ 5ನೇ ಶಾಖೆ ಆರಂಭವಾಗಿದೆ. ಮುಂದೆ ಕರ್ವಾಶೆ, ಬೈಲೂರು ಸೇರಿದಂತೆ ವಿವಿಧ ಕಡೆ ಶಾಖೆ ತೆರೆಯುವ ಉದ್ದೇಶವಿದೆ. ಶಾಖೆಗಳು ಹೆಚ್ಚಿದಂತೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಕಳ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಅನಿವಾರ್ಯತೆ ಮತ್ತು ತುರ್ತು ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಸಹಕಾರಿ ಬ್ಯಾಂಕ್‌ಗಳೇ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ ಎಂದರು. ಇದು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ನೆಲ್ಲಿಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್ ಮತ್ತು ಕಟ್ಟಡದ ಮಾಲಕ, ಹೊಸ್ಮಾರು ಜಯ ಕ್ಲಿನಿಕ್‌ನ ಡಾ| ಪ್ರಸಾದ್ ಬಿ. ಶೆಟ್ಟಿ ಅತಿಥಿಗಳಾಗಿ ಭಾಗವಸಿ ಶುಭಹಾರೈಸಿದರು.
ಸಂಘದ ಉಪಾಧ್ಯಕ್ಷ ಶಶಿಕಿರಣ್ ಜೈನ್ ಬೆಳ್ತಂಗಡಿ, ನಿರ್ದೇಶಕರಾದ ನಿರಂಜನ್ ಅಜಿ ನಾರಾವಿ, ಪದ್ಮರಾಜ ಅತಿಕಾರಿ ತೆಳ್ಳಾರು, ಪ್ರವೀಣ್ ಭಟ್ ಕಾರ್ಕಳ, ನಿರಂಜನ್ ಜೈನ್ ಕಾರ್ಕಳ, ಎಸ್. ಪಾರ್ಶ್ವನಾಥ ವರ್ಮ ಕಾರ್ಕಳ ಶಮಂತ್ ಕುಮಾರ್ ಜೈನ್ ಬೆಳ್ತಂಗಡಿ, ಪ್ರಶಾಂತ್ ಕುಮಾರ್ ಉಜಿರೆ, ಪದ್ಮಲತಾ ಧರ್ಮಸ್ಥಳ, ಭವ್ಯ ಜೈನ್ ಅಳದಂಗಡಿ ಮತ್ತು ಸುಜಾತಾ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊಸ್ಮಾರು ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಭಟ್ ಸ್ವಾಗತಿಸಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶು ಕುಮಾರ್ ಜೈನ್ ವಂದಿಸಿದರು.