ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣೆ

0

ಬೆಳ್ತಂಗಡಿ : ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣಾ ಸಮಾರಂಭವು ಮಾ. 22 ರಂದು ನಡೆಯಿತು.


ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೆತ್ತೂರು ಮಸೀದಿಯ ಇಮಾಮ್ ರಫೀಕ್ ಅಹ್ಸನಿ ದುವಾ ನೆರವೇರಿಸಿದರು. ಅಬೂಬಕ್ಕರ್ ಕೆ.ಎಸ್ ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು, ಅಲಿಯಬ್ಬ ಪುಲಾಬೆ ರಂಝಾನ್ ಸಂದೇಶ ನೀಡಿದರು.


ಬೆಳ್ತಂಗಡಿ ತಾಲೂಕಿನ 130 ಕುಟುಂಬಕ್ಕೆ ರಂಝಾನ್ ಕಿಟ್ ವಿತರಿಸಲಾಯಿತು. ಹಾಗೂ 100 ಕುಟುಂಬಕ್ಕೆ ರಂಝಾನ್ ಕಿಟ್ ಖರೀದಿಸಲು ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರ ಕುಟುಂಬದ ವತಿಯಿಂದ ರೂ. 1500 ರಂತೆ ಒಟ್ಟು ರೂ. ಒಂದೂವರೆ ಲಕ್ಷ ವಿತರಿಸಲಾಯಿತು.
ಅಬ್ಬೊನು ಮದ್ದಡ್ಕ ಉಮರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಉಮರ್ ನಾಡ್ಜೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here