ಬಜಿರೆ: ಭಜನಾ ಮಂದಿರಗಳು ಸರಸ್ವತಿಯ ಕೇಂದ್ರಗಳಾಗಬೇಕು ಆ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಅವರು ಮಾ.22 ರಂದು ಶ್ರೀ ಲಕ್ಷ್ಮೀ ಭಗವಂತ ಭಜನಾ ಮಂಡಳಿ ಲಕ್ಷ್ಮೀ ನಗರ ಬಜಿರೆ ಇಲ್ಲಿ ನಡೆದ ವಾರ್ಷಿಕ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಹಿರಿಯರಾದ ಪ್ರಭಾಕರ ಹೆಗ್ಡೆ ಅಟ್ಟಾಜೆಗುತ್ತು, ವೇಣೂರು ಗ್ರಾಮ ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಕ್ರಾಸ್ತ, ಸುನೀಲ್ ಪುಣ್ಕೆದಡಿ, ಲೋಕಯ್ಯ ಪೂಜಾರಿ, ಮಾಜಿ ಗ್ರಾ.ಪಂ ಅಧ್ಯಕ್ಷ ಸತೀಶ್ ಹೆಗ್ಡೆ, ಜನಜಾಗೃತಿ ವೇಣೂರು ವಲಯದ ಅಧ್ಯಕ್ಷ ಹರೀಶ್ ಪೊಕ್ಕಿ, ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಶಾಲಿನಿ, ಭಜನಾ ಮಂದಿರದ ಅಧ್ಯಕ್ಷ ಹಿರಿಯಣ್ಣ, ಪ್ರಮುಖರಾದ ನೋಣಯ್ಯ ಉಪಸ್ಥಿತರಿದ್ದರು.
ಸಮಿತಿ ಸದಸ್ಯ ಗಿರೀಶ್ ಸ್ವಾಗತಿಸಿ, ಅಶೋಕ್ ಕಜಿಪಟ್ಟ ನಿರೂಪಿಸಿ, ಅಜಿತ್ ಧನ್ಯವಾದವಿತ್ತರು.