ಪತ್ರಿಕಾ ಗೋಷ್ಠಿ
ಬೆಳ್ತಂಗಡಿ : ಎಂಡೋಸಲ್ಪಾನ್ ಸಂತ್ರಸ್ತ ಮಕ್ಕಳಿಗೆ ಶ್ರೀ ಗಣೇಶ ಸೇವಾ ಟ್ರಸ್ಟ್ ಘಟಕದ ವತಿಯಿಂದ ಉಜಿರೆಯಲ್ಲಿ ನಡೆಯುವ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಮತ್ತು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ದ. ಕ. ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 536 ನೇಯ ಸಾಂಸ್ಕೃತಿಕ ಸೇವಾ ಯೋಜನೆ ಸಾನಿಧ್ಯ ಉತ್ಸವ 2023 ಎಂಡೋಸಲ್ಪಾನ್ ಪೀಡಿತ ಹಾಗೂ ಮಾನಸಿಕ ಬಿನ್ನ ಸಾಮರ್ಥ್ಯದ ಮಕ್ಕಳಿಂದ ಮಾ.25 ರಂದು ಸಾಂಸ್ಕೃತಿಕ ಕಾರ್ಯಕ್ರಮ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ನಡೆಯಲಿದೆ ಎಂದು ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಮತ್ತು ಗೌರವ ಸಲಹೆಗಾರ ಪ್ರೇಮರಾಜ್ ರೋಶನ್ ಸಿಕ್ವೆರ ಹೇಳಿದರು.
ಅವರು ಮಾ.21 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸಂಜೆ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಶೃಂಗೇರಿ ಶ್ರೀ ಶಾರದಾ ಅಂದರ ಗೀತಾ ಗಾಯನ ಕಲಾ ಸಂಘದಿಂದ ರಸಮಂಜರಿ, ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಇವರ ನಿರ್ದೇಶನ ಮತ್ತು ಶಿಕ್ಷಕರ ನೆರವಿನಿಂದ ಎಂಡೋ ಸಲ್ಪಾನ್ ಪೀಡಿತ ಹಾಗು ಮಾನಸಿಕ ಬಿನ್ನ ಸಾಮರ್ಥ್ಯದ ಮಕ್ಕಳಿಂದ ಕಲ್ಲುರ್ಟಿ ಕಲ್ಕುಡ ಎಂಬ ದೈವಾರಾಧನೆ ಹಾಗು ಭಕ್ತಿ ಪ್ರಧಾನ ನಾಟಕ ಮತ್ತು ಯಕ್ಷಗಾನ ನಾಗಸ್ತ್ರ -ಕುಂಭಕರ್ಣ ಕಾಳಗ ನಡೆಯಲಿದೆ ಮತ್ತು ವಿವಿಧ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಗೌರವ ಸಲಹೆಗಾರ ಜಯಪ್ರಕಾಶ್ ಕನ್ಯಾಡಿ, ಸದಸ್ಯರಾದ ಸಂದೇಶ್, ಶಶಿಕಾಂತ ನಾಯ್ಕ ಉಪಸ್ಥಿತರಿದ್ದರು.