ಕನ್ಯಾಡಿ: ಕಂಚಿಮಾರು ತಂಡಕ್ಕೆ ಕೆ ಪಿ ಎಲ್ ಸೀಸನ್ 3 ಟ್ರೋಫಿ- ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ವೇದಿಕೆ ನಿರ್ಮಾಣಕ್ಕೆ ಮೆಚ್ಚುಗೆ

0

ಕನ್ಯಾಡಿ: ಧರ್ಮಸ್ಥಳದ ಕನ್ಯಾಡಿ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಕಂಚಿಮಾರು ಫ್ರೆಂಡ್ಸ್ ತಂಡ ಫೈನಲ್ ನಲ್ಲಿ ಗೆದ್ದುಕೊಂಡು ಟ್ರೋಫಿ ಮುಡಿಗೇರಿಸಿಕೊಂಡಿದೆ. ಮಾ. 19ರಂದು ನಡೆದ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು.
ಫೈನಲ್ ಹೋರಾಟದಲ್ಲಿ ಪ್ರಶಾಂತ್ ಪೇಜ್ ಪ್ಲೇ ನೇತೃತ್ವದ ಕಂಚಿಮಾರು ಫ್ರೆಂಡ್ಸ್ ಮತ್ತು ಅವಿನಾಶ್ ಶೆಟ್ಟಿ ಮಾಲಿಕತ್ವದ ಆಸ್ಪಿರೆಂಟ್ಸ್ ತಂಡಗಳ ನಡುವೆ ಹೋರಾಟ ನಡೆಯಿತು. ಇದರಲ್ಲಿ ಕಂಚಿಮಾರು ತಂಡ ಗೆಲುವು ಸಾಧಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಸಂದೀಪ್ ಉನ್ನಿಕೃಷ್ಣನ್ ವೇದಿಕೆಗೆ ಬಗ್ಗೆ ಮೆಚ್ಚುಗೆ
ಕನ್ಯಾಡಿ ಫ್ರೆಂಡ್ಸ್ ಆಯೋಜನೆ ಮಾಡಿರುವ ಕ್ರಿಕೆಟ್ ಟೂರ್ನಿಯ ವೇದಿಕೆ ಎಲ್ಲರ ಗಮನ ಸೆಳೆಯಿತು. ಮುಂಬೈ ದಾಳಿಯಲ್ಲಿ ವೀರ ಮರಣವನ್ನಪ್ಪಿಸಿರುವ ಮೇಜರ್ ಜನರಲ್ ಸಂದೀಪ್ ಉನ್ನಿಕೃಷ್ಣನ್ ಅವರ ವೇದಿಕೆ ನಿರ್ಮಾಣ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂದೀಪ್ ಉನ್ನಿಕೃಷ್ಣನ್ ರವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವೀರಾಗ್ರಣಿ ಸೈನಿಕನ ಬಗ್ಗೆ ಆಟಗಾರರಲ್ಲಿ, ಪ್ರೇಕ್ಷಕರಲ್ಲಿ ವಿಶೇಷ ಅರಿವು ಮೂಡಿಸಲಾಯಿತು.
ಹಲವು ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಈ ವೇಳೆ ಸನ್ಮಾನಿಸಲಾಯಿತು. ಪತ್ರಿಕರ್ತರಾಗಿ ಸಾಧನೆ ಮಾಡಿರುವ , ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ, ಸುದ್ದಿ ಮಾಧ್ಯಮದ ಮುಖ್ಯಸ್ಥ ದಾಮೋದರ್ ದೊಂಡೋಲೆ, ಸುದ್ದಿ ಮಾಧ್ಯಮದ ಆದಿತ್ಯ ದೊಂಡೋಲೆ, ಪತ್ರಕರ್ತ ಸ್ವಸ್ತಿಕ್ ಕನ್ಯಾಡಿ, ಪುಟಾಣಿ ಸಾಧಕಿ ಡಾ.ಶೌರ್ಯ, ಮೆಸ್ಕಾಂನ ಅಬ್ದುಲ್ ರಜಾಕ್ ಮುಲ್ಲಾ, ಮೆಸ್ಕಾಂನ ಲೈನ್ ಮ್ಯಾನ್ ಬಸಪ್ಪ ಬೆಳಗಿ ಇವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.ಇದೇ ವೇಳೆ ಸ್ಥಳೀಯ ಕಲಾವಿದ ನಿತೇಶ್ ಕನ್ಯಾಡಿ ಲಕ್ಷ್ಮೀ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್ ರವರ ಭಾವಚಿತ್ರ ರಚನೆ ಮಾಡಿದ್ದು, ಅವರಿಗೆ ನೀಡಲಾಯಿತು. ಇದೇ ವೇಳೆ ಕಲಾವಿದ ನಿತೇಶ್ ಕನ್ಯಾಡಿಯವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಶಾಸಕ ಹರೀಶ್ ಪೂಂಜ ಮಾತನಾಡಿ, ಲಕ್ಷ್ಮೀ ಇಂಡಸ್ಟ್ರೀಸ್ ಮೋಹನ್ ಅವರ ಸಾಥ್ ಇದ್ದರೆ ಕ್ರೀಡಾಕೂಟ ಯಶಸ್ವಿಯಾಗುತ್ತದೆ. ಕ್ರೀಡೆಗೆ ನೆರವು ನೀಡಲು ಬೆಳ್ತಂಗಡಿ ಹುಣ್ಸೆಕಟ್ಟೆಯಲ್ಲಿ 12 ಎಕರೆ ಪ್ರದೇಶವನ್ನು ಸರ್ಕಾರದ ಮೂಲಕ ಮೀಸಲಿಡಲಾಗಿದೆ.ಇದರಲ್ಲಿ 400 ಮೀಟರ್ ಟ್ರ್ಯಾಕ್, ವಾಲಿಬಾಲ್ ಒಳಾಂಗಣ, ಕಬಡ್ಡಿ ಒಳಾಂಗಣ, ಸ್ವಿಮ್ಮಿಂಗ್ ಫೂಲ್ ಇರುವ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಕ್ರಿಕೆಟ್ ಟೂರ್ನಿಗೂ ನೆರವು ನೀಡುವ ಮೈದಾನ ನಿರ್ಮಾಣ ಮಾಡಲಾಗುತ್ತದೆ. ಸುಮಾರು 10 ಕೋಟಿಯ ಕ್ರೀಡಾಂಗಣ ಮುಂದಿನ ಒಂದುವರೆ ವರ್ಷದಲ್ಲೇ ನಿರ್ಮಾಣವಾಗಲಿದೆ ಎಂದರು. ಮುಂಡಾಜೆಯಲ್ಲಿ ಕ್ರೀಡಾ ವಸತಿ ಶಾಲೆಯೂ ನಿರ್ಮಾಣವಾಗಲಿದೆ ಎಂದರು. ಬೆಳ್ತಂಗಡಿಯ ಯುವಕರು ಪ್ರೋ ಕಬಡ್ಡಿ, ವಾಲಿಬಾಲ್, ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾಗಿಯಾಗುವಂತಹ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಇದೇ ವೇಳೆ ಮಾತನಾಡಿದ ಮೋಹನ್ ಕುಮಾರ್, ಕನ್ಯಾಡಿಯ ಕ್ರಿಕೆಟ್ ಟೂರ್ನಿ ಎಲ್ಲರಿಗೂ ಮಾದರಿಯಾಗಿದೆ. ವೀರ ಸೇನಾನಿಗೆ ಇವರು ನೀಡಿರುವ ಗೌರವವನ್ನು ನೋಡಿದಾಗ ಖುಷಿಯಾಗುತ್ತದೆ. ಈ ಟೂರ್ನಿಯ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವವರಿಗೆ ಶುಭವಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರವಿಭಟ್ ಪಜಿರಡ್ಕ, ಶ್ರೀಧರ್ ಕಲ್ಮಂಜ,ಅರುಣ್ ರೆಬೆಲ್ಲೋ, ಸುದರ್ಶನ್ ಕೆ ವಿ, ನಂದ ಭಟ್, ಹರೀಶ್ ಗೋವಾ, ಮನೋಹರ್ ರಾವ್ ಕನ್ಯಾಡಿ, ಶ್ರೀನಿವಾಸರಾವ್,ಪ್ರೀತಮ್ ಡಿ, ರಮೇಶ್ ಶೆಟ್ಟಿ, ಅಭಿಜಿತ್ ಭಂಡಾರಿ, ಚೇತನ್ ನಡುಗುಡ್ಡೆ,ಅವಿನಾಶ್ ಶೆಟ್ಟಿ, ರಾಕೇಶ್ ಧರ್ಮಸ್ಥಳ, ಲತೇಶ್ ಧರ್ಮಸ್ಥಳ, ಪ್ರಶಾಂತ್, ಕೆ ಎಫ್ ಸಿ ಅಧ್ಯಕ್ಷ ನವೀನ್ ಉಪಸ್ಥಿತರಿದ್ದರು. ಕೆ ಎಫ್ ಸಿ ತಂಡದ ಅರುಣ್ ರಾವ್ ಮತ್ತಿಲ, ನವೀದ್ ಕನ್ಯಾಡಿ, ನಿತಿನ್ ದೊಂಡೋಲೆ,ಸುಂದರೇಶ್, ಮನೋಹರ್ ದೊಂಡೋಲೆ,ಸುಂದರ ನಾರ್ಯ, ಮಂಜು, ನವೀನ್ ಕನ್ಯಾಡಿ, ನಿತೇಶ್,ರಂಜಿತ್ ನೇತ್ರಾವತಿ, ಪ್ರತೀಕ್ ದೊಂಡೋಲೆ, ಕಿರಣ್ ದೊಂಡೋಲೆ,ಜಯಂತ್ ನಾರ್ಯ, ಸುಹಾಸ ಕನ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here