


ಉಜಿರೆ: ಧರ್ಮಜಾಗೃತಿಯೊಂದಿಗೆ ಶಾಂತಿ ಸಹೋದರತೆಯ ಅಂತರೀಕ್ಷ ಕಾಲದ ಆವಶ್ಯಕತೆಯಾಗಿದ್ದು ರಕ್ತಕ್ರಾಂತಿ ಯಿಂದ ಶಾಂತಿ ಎಂದಿಗೂ ಸಾಧ್ಯವಿಲ್ಲ. ಯುವ ಪಡೆಯಿಂದ ಶಾಂತಿಯೆಂಬ ಕ್ರಾಂತಿಯಾಗಲಿ ಎಂದು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು.

ಉಜಿರೆಯ ಮಲ್‌ಜಅ ಕ್ಯಾಂಪಸ್‌ನಲ್ಲಿ ಮಾ.18-19 ರಂದು ನಡೆದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ರಾಜ್ಯ ಪ್ರತಿನಿಧಿ ಸಮಾವೇಶ ‘ಖಿಯಾದ’ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲೆತೀಫ್ ಸಅದಿ ಶಿವಮೊಗ್ಗ ವಹಿಸಿದ್ದರು.
ಎಸ್‌ವೈಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಹಮೀದ್ ಬಜ್ಪೆ, ಅನಿವಾಸಿ ಭಾರತೀಯರ ಸಂಘಟನೆ ಕೆ.ಸಿ.ಎಫ್ ಇದರ ಅಂತಾರಾಷ್ಟ್ರೀಯ ಕೌನ್ಸಿಲ್ ಚೇರ್ಮೆನ್ ಯೂಸುಫ್ ಸಖಾಫಿ ಬೈತಾರ್, ಖಿಯಾದ ಪ್ರತಿನಿಧಿ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷ ಸಲೀಂ ಕನ್ಯಾಡಿ, ಜನರಲ್ ಕನ್ವೀನರ್ ಜಮಾಲುದ್ದೀನ್ ಲೆತೀಫಿ, ಕೋಶಾಧಿಕಾರಿ ಅಬೂಬಕ್ಕರ್ ಮಟ್ಲ, ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಸಮಿತಿ ಅಧ್ಯಕ್ಷ ಎಸ್. ಎಂ ಕೋಯ ತಂಙಳ್, ಹಮೀದ್ ಬಜ್ಪೆ, ಮಾಧ್ಯಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ, ಸ್ವಯಂ ಸೇವಕರ ಸಂಯೋಜಕ ನಾಸಿರ್ ಪಡ್ಡಂದಡ್ಕ ಸಹಿತ ಪ್ರಮುಖ ಗಣ್ಯರು ವೇದಿಕೆಯಲ್ಲಿದ್ದರು.

ಕೆ.ಸಿ ರೋಡ್ ಹುಸೈನ್ ಸಅದಿ, ಇಸ್ಮಾಯಿಲ್ ಸಅದಿ ಮಾಚಾರ್, ತ್ವಾಹಿರ್ ಸಖಾಫಿ ಮಂಜೇರಿ, ಅಬ್ದುಲ್ ರಶೀದ್ ಝೈನಿ ಮೊದಲಾದ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿನಿಧಿಗಳಿಗೆ ತರಬೇತಿಗಳು ನಡೆದವು.
ರಾಜ್ಯ ಸಮಿತಿ ಮಹಾ ಅಧಿವೇಶನ;
ಸಮಾವೇಶದ ಜೊತೆಗೆ ರಾಜ್ಯ ಎಸ್ಸೆಸ್ಸೆಫ್ ನ ಮಹಾ ಅಧಿವೇಶನ ನಡೆಯಿತು. ರಾಜ್ಯದ 25 ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸಂಘಟನೆಯ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸಾರಥಿಗಳ ಆಯ್ಕೆ ನಡೆಸಿದರು. ರಾಜ್ಯಾಧ್ಯಕ್ಷ ರಾಗಿ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಸಫ್ರಾನ್ ಚಿಕ್ಕಮಗಳೂರು, ಕೋಶಾಧಿಕಾರಿಗಳಾಗಿ ಕೆ.ಎಂ ಮುಸ್ತಫಾ ನಈಮಿ ಇವರು ಆಯ್ಕೆಯಾದರು.
ನವಸಾರಥಿಗಳೊಂದಿಗೆ ನಡಿಗೆ;
ಸಮಾವೇಶದ ಬಳಿಕ ಕಾಶಿಬೆಟ್ಟು ವಿನಿಂದ ಉಜಿರೆ ಬೆಳಾಲು ತಿರುವುವರೆಗೆ ‘ನವಸಾರಥಿಗಳೊಂದಿಗೆ ನಡಿಗೆ’ ಎಂಬ ಜಾಥಾ ನಡೆಯಿತು.