ಮಾ.23 -30 : ಶ್ರೀ ರಾಮ ಕ್ಷೇತ್ರದಲ್ಲಿ 63 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರೋತ್ಸವ

0

ಪತ್ರಿಕಾ ಗೋಷ್ಠಿ
ಧರ್ಮಸ್ಥಳ : ದಕ್ಷಿಣದ ಆಯೋಧ್ಯೆಯೆಂದು ಕರೆಯಲ್ಪಡುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರ, ಧರ್ಮಸ್ಥಳದಲ್ಲಿ ಮಾ. 24 ರಿಂದ ಮಾ. 30 ರ ವರೆಗೆ 63 ನೇ ವರ್ಷದ ಶ್ರೀರಾಮ ತಾರಕ ಮಂತ್ರದ ಸಪ್ತಾಹ ಹಾಗೂ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು “ಮಹಾ ಬ್ರಹ್ಮರಥೋತ್ಸವವು” ನಡೆಯಲಿದೆ ಎಂದು ಶ್ರಿ ರಾಮ ಕ್ಷೇತ್ರದ ಪೀಠಾದೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮಾ.19 ಶ್ರೀ ರಾಮ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವವರು ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ‘ತಾರಕ ಮಂತ್ರವನ್ನು ಪ್ರಾರಂಭಿಸಿ 63 ವರ್ಷಗಳಾಗಿವೆ, ರಾಜ್ಯದ ಯಾವುದೇ ಮೂಲೆಯಲ್ಲಿ ಕಂಡು ಕೇಳರಿಯದ ಈ ಏಳು ದಿನಗಳ ಆಹೋ ರಾತ್ರಿ ನಡೆಯುವ ಭಜನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಭಜನಾ ತಂಡಗಳು ಒಂದು ಭಜನಾ ಸಪ್ತಾಹದಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆಯುತ್ತಾರೆ.
ಮಾ.23 ರಂದು ಬೆಳಗ್ಗೆ 9.30ಕ್ಕೆ ಶ್ರೀರಾಮ ನಾಮ ಸಪ್ತಾಹ ಸಮಾರಂಭದ ನಂದಾ ದೀಪವನ್ನು ಬೆಳಗಿಸುವುದರ ಮೂಲಕ ಜಾತ್ರೋತ್ಸವದ ಉದ್ಘಾಟನೆಗೊಳ್ಳಲಿದ್ದು ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು, ಲೋಕಸಭಾ ಕ್ಷೇತ್ರದ ಸಂಸದರು, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಉಭಯ ಜಿಲ್ಲೆಯ ಶಾಸಕರುಗಳು, ಎಲ್ಲಾ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರುಗಳು ಹಾಗೂ ಕ್ಷೇತ್ರದ ಎಲ್ಲಾ ಗೌರವಾನ್ವಿತ ಟ್ರಸ್ಟಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ, ಭಜನಾ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬೆಳಗ್ಗೆ ಜಾತ್ರೋತ್ಸವದ ಉದ್ಘಾಟನೆ, ಶ್ರೀ ಸಿದ್ಧಿವಿನಾಯಕ ಮತ್ತು ಕ್ಷೇತ್ರಪಾಲ ಗಣಪತಿ ದೇವರ ಬಲಿ ಉತ್ಸವ, ಸಂಜೆ 6.30 ರಿಂದ ಶ್ರುತಿ ಆರ್ಟ್ಸ್, ಕಾವಲಕಟ್ಟೆಯ ದಿವಾಕರ್ ದಾಸ್ ಇವರ ಸಂಯೋಜನೆಯೊಂದಿಗೆ ಸುಪ್ರಸಿದ್ದ ಕಲಾವಿದರಿಂದ ‘ಸತ್ಯಹರಿಶ್ಚಂದ್ರ’ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.24 ರಂದು ರಾತ್ರಿ ಗಂಟೆ 8.೦೦ಕ್ಕೆ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶಿರಡಿ ಸಾಯಿಬಾಬಾ ಗುರುಗಳ ಉತ್ಸವ ಮೂರ್ತಿ ಬಲಿ ಉತ್ಸವ, ಸಂಜೆ 6.30 ರಿಂದ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ದಮಯಂತಿ ಪುನ:ಸ್ವಯಂವರ, ಯಕ್ಷಗಾನ, ಬಯಲಾಟ, ನಡೆಯಲಿದೆ.
ಮಾ.25 ರಂದು ರಾತ್ರಿ ಗಂಟೆ 8.00 ಕ್ಕೆ ಶ್ರೀ ರಾಮ ರವರ ‘ರಜತ ಪಾಲಕ’ ಉತ್ಸವ . ಸಂಜೆ 6.30 ರಿಂದ ಗಾನ ನೃತ್ಯ ಆಕಾಡೆಮಿ, ಮಂಗಳೂರು ಇದರ ನಿರ್ದೇಶಕಿ ವಿದ್ಯಾಶ್ರೀ ರಾಧಕೃಷ್ಣ ಮತ್ತು ಬಳಗದವರಿಂದ ನೃತ್ಯ ಸಂಗಮ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಮಾ.26 ರಂದು ರಾತ್ರಿ 8.00ಕ್ಕೆ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಹಾಗೂ “ಪುಷ್ಪ ರಥೋತ್ಸವ’ ಸಂಜೆ ಗಂಟೆ 6.30 ರಿಂದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಮಸ್ತ್ ಮ್ಯಾಜಿಕ್ ನಡೆಯಲಿದೆ.
ಮಾ27 ರಂದು ರಾತ್ರಿ ಗಂಟೆ 8.00 ಕ್ಕೆ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ ಹಾಗೂ ‘ಚಂದ್ರಮಂಡಲ ರಥೋತ್ಸವ’ ಸಂಜೆ ಗಂಟೆ 6.30.ಕ್ಕೆ ಶ್ರೀ ದೇವಿ, ಸಚಿನ್, ಸಂಗೀತ ಶಿಕ್ಷಕಿ ನಿನಾದ ಕ್ಲಾಸಿಕಲ್ ಧರ್ಮಸ್ಥಳ ಇವರಿಂದ ದಾಸವಾಣಿ ಮತ್ತು ಸುಗಮ ಸಂಗೀತ ನಡೆಯಲಿದೆ.
ಮಾ.28 ರಂದು ರಾತ್ರಿ ಗಂಟೆ 8ಕ್ಕೆ ಶ್ರೀ ಗೋಪಾಲಕೃಷ್ಣ ದೇವರ ಬಲಿ ಉತ್ಸವ, ಮತ್ತು ‘ಬೆಳ್ಳಿ ರಥೋತ್ಸವ”, ಸಂಜೆ 6.30 ರಿಂದ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಸಂಚಾಲಕರಾದ ಉಜಿರೆ ಅಶೋಕ ಭಟ್ ನೇತೃತ್ವದೊಂದಿಗೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಶಿವ ಭಕ್ತ ವೀರಮಣಿ” ಯಕ್ಷಗಾನ ಬಯಲಾಟ, ನಡೆಯಲಿದೆ.
ಮಾ.29 ರಂದು ರಾತ್ರಿ 8 ಕ್ಕೆ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಬಲಿ ಉತ್ಸವ ಹಾಗೂ ‘ಶ್ರೀ ಹನುಮಾನ್ ರಥೋತ್ಸವ’, ಸಂಜೆ 6.30 ರಿಂದ ರುದ್ರ ಬಯಲಾಟ ಮಂಗಳೂರು ಅರ್ಪಿಸುವ “ಶೂದ್ರ ಶಿವ” ಕನ್ನಡ ನಾಟಕ, ಪ್ರದರ್ಶನಗೊಳ್ಳಲಿದೆ.
ಮಾ.30 ರಂದು ಬೆಳಗ್ಗೆ 9.30 ಕ್ಕೆ ಶ್ರೀ ರಾಮ ತಾರಕ ಮಂತ್ರ, ಯಜ್ಞದ ಮಂಗಳ, ಮಧ್ಯಾಹ್ನ ಶ್ರೀ ರಾಮ ದೇವರ, ಪಾಲಕಿ, ಬಲಿ ಉತ್ಸವ, ರಾತ್ರಿ 7 ರಿಂದ ಕ್ಷೇತ್ರದ ರಕ್ತೇಶ್ವರಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ, ರಾತ್ರಿ ಮಹಾ ಬ್ರಹ್ಮ ರಥೋತ್ಸವ ನಡೆಯಲಿದೆ.
ಏ.1 ರಂದು ಆದಿ ಪಜಿರರಡ್ಕ ಶ್ರೀ ದೇವರಗುಡ್ಡೆ ದೇವÀಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ, ರಾತ್ರಿ 8 ರಿಂದ ಸನ್ಯಾಸಿ ಪಂಜುರ್ಲಿ ಹಾಗೂ ಕಲ್ಲುರ್ಟಿಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟಿಗಳಾದ ತುಕರಾಮ ಸಾಲಿಯಾನ್ ಅರ್ಲ ,ಕೃಷ್ಣಪ್ಪ ಗುಡಿಗಾರ್, ಧರ್ಮಸ್ಥಳ ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ಚಂದನ್ ಕಾಮತ್, ನ್ಯಾಯವಾದಿ ಕೇಶವ ಗೌಡ ಪಿ, ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಉದ್ಯಮಿ ರವೀಂದ್ರ ಪುಜಾರಿ, ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here