


ಸುದ್ದಿ ಫಲಶ್ರುತಿ
ಮಚ್ಚಿನ ಗ್ರಾಮದ ಸಮುದಾಯ ಭವನವು ಅಭಿವೃದ್ಧಿಯಲ್ಲಿ ಕಂಗೊಳಿಸುತ್ತಿದೆ. ಈ ಸಮುದಾಯ ಭವನದಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದೆ ಗ್ರಾಮದ ಜನರು ಕಾರ್ಯಕ್ರಮ ನಡೆಸಲು ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ ಎಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಇವರ ಮುತುವರ್ಜಿಯಲ್ಲಿ ಸಮುದಾಯ ಭವನ ಕಂಗೊಳಿಸುವಂತಾಗಿದೆ.

ಸುಸಜ್ಜಿತ ಊಟದ ವ್ಯವಸ್ಥೆ, ಇಂಟರ್ ಲಾಕ್, ಸಮುದಾಯ ಭವನದ ಮುಂದೆ ವರ್ಣರಂಜಿತ ವಿಶಾಲವಾದ ಪಾರ್ಕ್ ಹಾಗೂ ವಿಶ್ರಾಂತಿ ಪಡೆಯಲು ಸುಂದರವಾದ ಆಸನದ ವ್ಯವಸ್ಥೆ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ರಾರಾಜಿಸುತ್ತಿದೆ.
ಮಚ್ಚಿನದ ಸಮುದಾಯ ಭವನ ಒಂದು ಸಾರಿ ಗ್ರಾಮಸ್ಥರ ಮನಸೆಳೆಯುವಂತೆ ಮಾಡುತ್ತಿದೆ. ಸಂಜೆಯ ಸಮಯದಲ್ಲಿ ಮಕ್ಕಳಿಗೆ, ವೃದ್ಧರಿಗೆ ಸಮಯ ಕಳೆಯುವಂತ ಸುಂದರ ತಾಣ ಇದಾಗಿದೆ, ಗ್ರಾಮದ ಜನರ ಬಹು ದಿನದ ಬೇಡಿಕೆ ಈಡೇರಿದಂತಾಗಿದೆ. ಕಾಮಗಾರಿ ಪೂರ್ಣಗೊಂಡು ಶೀಘ್ರದಲ್ಲಿ ಉದ್ಘಾಟನೆಗೊಂಡು ಜನರು ಪ್ರಯೋಜನ ಪಡೆದುಕೊಳ್ಳುವಂತಾಗಿದೆ.
-ಹರ್ಷ ಬಳ್ಳಮಂಜ