ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರಾ ಮಹೋತ್ಸವವು ಶ್ರೀ ವೇದ ಮೂರ್ತಿ ಸದಾಶಿವ ಉಪಾಧ್ಯಾಯ ರೆಂಜಾಳ , ತಂತ್ರಿಗಳ ನೇತೃತ್ವದಲ್ಲಿ ಮಾ.14 ರಂದು ಪ್ರಾರಂಭಗೊಂಡು ಮಾ.19 ವರೆಗೆ ನಡೆಯಲಿದೆ.
ಮಾ.17 ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನ ಪೂಜೆ, ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ ಸಮಯದಲ್ಲಿ ಸ್ಥಳೀಯ ದೇವರ ಕಟ್ಟೆ ಹಾಗೂ ದೈವಗಳ ಭಂಡಾರಕ್ಕೆ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕೊಯ್ಯೂರುಗುತ್ತು ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಬಿ ಹರೀಶ್ಚಂದ್ರ ಬಳ್ಳಾಲ್, ಕೆ. ಅಶೋಕ್ ಕುಮಾರ್ ಬಾಂಗಿಣ್ಣಾಯ, ಶ್ರೀ ಪಂಚಾದುರ್ಗಾ ಭಜನಾ ಮಂಡಳಿ ಕೊಯ್ಯೂರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ರಾತ್ರಿ ಚಂಡಿಕಾ ಯಾಗ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಆರ್ಯಭಟ ಶ್ರೀ ಹರಿದಾಸ ಡೋಗ್ರ ಇವರಿಂದ ಸ್ಯಾಕ್ಸೋಪೋನ್, 7.30 ರಿಂದ ಶೆಟ್ಟಿ ಆರ್ಟ್ಸ್ ಗಿರಿಧರ ಶೆಟ್ಟಿ ಬಳಗದಿಂದ ನೃತ್ಯ ವೈಭವ, ಶ್ರೀ ಪಂಚದರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ವಿರಚಿತ ‘ಉಂದು ಎಂಚಿನ’ ತುಳು ಹಾಸ್ಯ ನಾಟಕ , ರಾತ್ರಿ 9 ಗಂಟೆಯಿಂದ ಧರ್ಮದೈವಗಳ ನೇಮೋತ್ಸವ , ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ ನಡೆಯಲಿದೆ.