ತುಳುನಾಡ ಗುಳಿಗ ದೈವಕ್ಕೆ ಅಪಮಾನ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ದೈವದ ಸನ್ನಿಧಿಯಲ್ಲಿ ಕ್ಷಮೆ ಯಾಚಿಸಬೇಕು : ನಲಿಕೆಯವರ ಸಮಾಜ ಸೇವಾ ಸಂಘ

0

ಪತ್ರಿಕಾ ಗೋಷ್ಠಿ
ಬೆಳ್ತಂಗಡಿ : ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ತುಳುನಾಡಿನ ಆರಾಧನೆಯ ಗುಳಿಗ ದೈವಕ್ಕೆ ಜಪಾನ್ ಗುಳಿಗೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಇವರು ಗುಳಿಗ ದೈವದ ಸನ್ನಿಧಿಯಲ್ಲಿ ಬಂದು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಹೇಳಿದರು. ಅವರು ಮಾ.17 ರಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ತುಳುನಾಡಿನ ದೈವದ ಹೆಸರು ಹೇಳುವ ನೈತಿಕತೆ ಸಿ. ಟಿ. ರವಿ ಯವರಿಗೆ ಇಲ್ಲ. ಕ್ಷಮೆ ಕೇಳದೆ ಇದ್ದರೆ ಅವರು ಬರುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಕನ್ನಡ ಸಂಸ್ಕೃತಿಯ ಸಚಿವ ಸುನಿಲ್ ಕುಮಾರ್ ದೈವ ನರ್ತನ ಕಲಾವಿದರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದರು ಆದರೆ ಇವರಿಗೆ ಪಿಂಚಣಿ ಭಾಗ್ಯ ಬರಲಿಲ್ಲ ಇದು ಕೂಡ ದೈವ ನರ್ತನ ಕಲಾವಿದರಿಗೆ ಮಾಡಿದ ಅವಮಾನ. ಇತ್ತೀಚಿನ ದಿನ ಗಳಲ್ಲಿ ಕೊರಗಜ್ಜನ ಕಟ್ಟೆ ಮಾಡಿ ಹರಕೆಯ ವಿಷಯದಲ್ಲಿ ದುಡ್ಡು ಮಾಡುವ ದಂಧೆ ನಡೆಯುತ್ತಿದೆ, ಯಕ್ಷಗಾನ, ನಾಟಕಗಳಲ್ಲಿ ಕೊರಗಜ್ಜನಿಗೆ ಅವಮಾನ ವಾಗಿದೆ ಇದನ್ನು ತಕ್ಷಣ ನಿಲ್ಲಿಸ ಬೇಕು. ಈ ಎಲ್ಲಾ ಅವಮಾನವನ್ನು ಖಂಡಿಸಿ ದೈವಾರಾಧಕರ ಜಿಲ್ಲಾ ಸಮಾವೇಶ ಮಾಡಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಸಮಿತಿ ಉಪಾಧ್ಯಕ್ಷ ರಾಮು ಶಿಶಿಲ, ಮಾಜಿ ಕಾರ್ಯದರ್ಶಿ ಅನಂತ ಮುಂಡಾಜೆ, ದೈವಾರಾಧನ ಸಮಿತಿ ಅಧ್ಯಕ್ಷ ಜನಾರ್ದನ ಬಳ್ಳಮಂಜ, ಯುವ ವೇದಿಕೆಯ ಮಾಜಿ ಕಾರ್ಯದರ್ಶಿ ರಮೇಶ್ ಕೇಳ್ತಾಜೆ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here