ಬೆಳ್ತಂಗಡಿ: ಮಾ.16ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಪ್ರಕರಣ ಪತ್ತೆ ಹಚ್ಚಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಬಂಟ್ವಾಳ ಅಬಕಾರಿ ಉಪ ಅಧೀಕ್ಷಕರು ಹಾಗೂ ಬೆಳ್ತಂಗಡಿ ಅಬಕಾರಿ ನಿರೀಕ್ಷಕರ ನಿರ್ದೇಶನದಂತೆ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪೂರ್ವಭಾವಿ ತಯಾರಿ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ನಡೆಸುತ್ತಿದ್ದಾಗ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ದಿಡುಪೆ ಕಜಕ್ಕೆ ಹೋಗುವ ಡಾಮರು ಮಾರ್ಗದ ಎಡಬದಿಯಲ್ಲಿ ದ್ವಿ ಚಕ್ರ ವಾಹನ ( ಕೆಎ-70-ಜೆ-0188)ದಲ್ಲಿ ಮಲವಂತಿಗೆ ಗ್ರಾಮದ ಬಲಾಯಿದಷ್ಟು ನಿವಾಸಿ ಸತೀಶ್ ಗೌಡ ಎಂಬಾತ ಅಕ್ರಮವಾಗಿ 4,140 ಲೀಟರ್ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ವಾಹನ ಹಾಗೂ ಮದ್ಯವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ವಾಹನ ಹಾಗೂ ಸೊತ್ತಿನ ಒಟ್ಟು ಮೌಲ್ಯ ಸುಮಾರು 76,200/- ಆಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಯ್ಯದ್ ಶಬೀರ್, `ಅಬಕಾರಿ ಕಾನ್ಸ್ ಟೇಬಲ್ ಗಳಾದ ಭೋಜ ಕೆ, ವಿನೋಯ್ ಸಿ.ಜೆ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ. ಭಾಗವಹಿಸಿದ್ದರು.
ಅಬಕಾರಿ ಇಲಾಖೆಯ ಕಾರ್ಯಾಚರಣೆ: ಮಲವಂತಿಗೆಯಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣ ಪತ್ತೆ
p>