


ಉಜಿರೆ: ದಿ ನ್ಯೂ ಇಂಡಿಯನ್ ಟೈಮ್ಸ್ ವೆಬ್ ಪೋರ್ಟಲ್ ನ 6ನೇ ವರ್ಷದ 2023 ನೇ ಸಾಲಿನ ಅತ್ತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ನ್ಯೂಸ್ ಫಸ್ಟ್ ವಾಹಿನಿಯ ನಿರೂಪಕಿ ,ಉಜಿರೆಯ ವಿದ್ಯಾಶ್ರೀ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ವಾಹಿನಿಯ ಬೆಸ್ಟ್ ಆಂಕರ್ ಆಗಿ ಗುರುತಿಸಲ್ಪಟ್ಟಿದ್ದಾರೆ.
ಅವರು ಉಜಿರೆಯ ಶಿವರಾಂ ಬಿ.ಕೆ ಅವರ ಸುಪುತ್ರಿ ಹಾಗೂ ಉಜಿರೆ ಶ್ರೀ ಧ .ಮಂ .ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ .
ತನಗೆ ಅತ್ತ್ಯುತ್ತಮ ನಿರೂಪಕಿ ಪ್ರಶಸ್ತಿ ಬಂದ ಬಗೆಗೆ ಅವರು ಪ್ರತಿಕ್ರಿಯಿಸಿ “ಪ್ರಶಸ್ತಿಯ ಮೂಲಕ ಹೆಗಲ ಮೇಲಿನ ಜವಾಬ್ದಾರಿ ಹೆಚ್ಚಿಸಿದ್ದಾರೆ. ಹಗಲಿರುಳು ಕೆಲಸ ಮಾಡೋ ವೃತ್ತಿ ನಮ್ಮದು. ಆದ್ರೆ ಹೀಗೆ ಸಾರ್ವಜನಿಕವಾಗಿ ನಮ್ಮನ್ನ ಗುರುತಿಸೋರು ತುಂಬಾ ಕಡಿಮೆ. ಹೀಗಿರೋವಾಗ ರಘು ಭಟ್, ಸುಗುಣ ಭಟ್ ಹಾಗೂ ಅವರ ಇಡೀ ತಂಡ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ , ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡ್ತಿದ್ದಾರೆ. ಈ ಪ್ರಶಸ್ತಿ ನನಗೆ ಸಿಗೋಕೆ ಕಾರಣರಾದ ನ್ಯೂಸ್‌ಫಸ್ಟ್ ವಾಹಿನಿಯ ಸಿಇಓ ರವಿಕುಮಾರ್ , ವಾಹಿನಿಯ ಎಡಿಟರ್ ಇನ್ ಚೀಫ್ ಮಾರುತಿ, ಟೈಗರ್ ಬಾಬು , ಸಿದ್ದೇಶ್ , ಅಯ್ಯಪ್ಪ , ಅಂಕಪ್ಪ ಜೊತೆಗೆ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತು ಪ್ರೋತ್ಸಾಹಿಸುವ ನಮ್ಮ ಇಡೀ ನ್ಯೂಸ್‌ಫಸ್ಟ್ ಕುಟುಂಬಕ್ಕೆ , ಕಷ್ಟ ಪಟ್ಟು ಕಲಿಸಿದ ಅಪ್ಪ ಅಮ್ಮನಿಗೆ ಹಾಗು ಪತ್ರಿಕೋದ್ಯಮ ಕಲಿಸಿದ ಉಜಿರೆ ಎಸ್ .ಡಿ.ಎಂ. ಕಾಲೇಜಿಗೆ ಚಿರಋಣಿ.”ಎನ್ನುತ್ತಾರೆ.