ಕಡಿರುದ್ಯಾವರ ಎರ್ಮಾಲ್ ಪಲ್ಕೆ ಸರ್ಕಾರಿ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ

0

ಕಡಿರುದ್ಯಾವರ: ಇಲ್ಲಿನ ಎರ್ಮಾಲ್ ಪಲ್ಕೆ ಎಂಬಲ್ಲಿ ಸರ್ಕಾರಿ ಬಾವಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಎರ್ಮಾಲ್ ಪಲ್ಕೆಯ ಐದು ಸೆನ್ಸ್ ಕಾಲೋನಿಯಲ್ಲಿ ವಾಸಿಸುತ್ತಿರುವ ಪ್ರವೀಣ್ ಎಂಬಾತ ಮೃತ ದುರ್ದೈವಿ. ಎರಡು ವರ್ಷದಿಂದ ಈತ ಎರ್ಮಾಲ್ ಪಲ್ಕೆಯಲ್ಲಿ ವಾಸವಿರುವುದಾಗಿ ತಿಳಿದುಬಂದಿದೆ.
ಈತ ಪತ್ನಿ, ಮಕ್ಕಳ ಬಗ್ಗೆ ಸರಿಯಾದ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಪ್ರವೀಣ್ ಎರ್ಮಾಲ್ ಪಲ್ಕೆ ಅಥವಾ ಕಡಿರುದ್ಯಾವರ ಮೂಲದ ವ್ಯಕ್ತಿ ಅಲ್ಲ ಎನ್ನಲಾಗಿದೆ. ಈಗಾಗ್ಲೇ ಸ್ಥಳೀಯರು, ಗ್ರಾಮ ಪಂಚಾಯತ್ ಮುಖಂಡರು ಸ್ಥಳದಲ್ಲಿದ್ದು ಘಟನೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.


ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದೋ, ಅಕಸ್ಮಾತ್ ಆಗಿ ಬಾವಿಗೆ ಬಿದ್ದದ್ದೋ, ಮತ್ಯಾರದ್ದೋ ಸಂಚಿನಿಂದ ಸಾವನ್ನಪ್ಪಿದ್ದೋ ಅನ್ನುವ ಬಗ್ಗೆ ತನಿಖೆಯ ನಂತರ ತಿಳಿದುಬರಬೇಕಿದೆ.

p>

LEAVE A REPLY

Please enter your comment!
Please enter your name here