ಉಜಿರೆ:”ಸ್ಪೇಸ್ ಆನ್ ವೀಲ್ಸ್ ಹಾಗೂ ಮೊಬೈಲ್ ಪ್ಲಾನೆಟೇರಿಯಮ್”ಬಾಹ್ಯಾಕಾಶ ಸಂಬಂಧಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಉದ್ಘಾಟನೆ

0

ಉಜಿರೆ: ಎಸ್. ಡಿ. ಯಂ. ತಾಂತ್ರಿಕ ಮಹಾವಿದ್ಯಾಲಯ, ದಕ್ಷಿಣ ಕನ್ನಡ ವಿಜ್ಞಾನ ಘಟಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸಂಘ ಹಾಗೂ ಇಸ್ರೋದ ಸಹಯೋಗದೊಂದಿಗೆ “ಸ್ಪೇಸ್ ಆನ್ ವೀಲ್ಸ್ ಹಾಗೂ ಮೊಬೈಲ್ ಪ್ಲಾನೆಟೇರಿಯಮ್” ಎಂಬ ಬಾಹ್ಯಾಕಾಶ ಸಂಬಂಧಿತ ವಿಚಾರಗಳ ಎರಡು ದಿನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಾ, 14 ರಂದು ನೆರವೇರಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ವಿಜ್ಞಾನಿ ಡಾ. ಶ್ರೀನಿವಾಸ್ ರವರು ಪ್ರದರ್ಶನವನ್ನು ಉದ್ಘಾಟಸಿ ಮಾತನಾಡುತ್ತಾ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ “ಸ್ಪೇಸ್ ಆನ್ ವೀಲ್ಸ್” ಎಂಬ ಈ ಸಂಚಾರಿ ಬಸ್ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್. ಡಿ. ಯಂ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳಾದ ಶ್ರೀ. ಡಿ. ಹರ್ಷೇಂದ್ರ ಕುಮಾರ್ ರವರು ಮಾತನಾಡುತ್ತಾ, ಈ ನಿಟ್ಟಿನಲ್ಲಿ ಇಸ್ರೋದ ಈ ಕಾರ್ಯವು ಶ್ಲಾಘನೀಯವಾದದ್ದು, ವಿದ್ಯಾರ್ಥಿಗಳು ಈ ಬಾಹ್ಯಾಕಾಶದ ವಿಜ್ಞಾನ ಹಾಗೂ ಉಪಗ್ರಹ ತಂತ್ರಜ್ಞಾನದಿಂದ ಸ್ಪೂರ್ತಿ ಪಡೆದು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ದೇಶಕ್ಕೆ ಕೊಡುಗೆ ನೀಡವಂತಾಗಲೆಂದು ಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್, ದಕ್ಷಿಣ ಕನ್ನಡ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಶ್ರೀ. ಗೋಪಾಲ ಕೃಷ್ಣರವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ. ಬಸವ ವಂದಿಸಿದರು. ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ. ಗಿರೀಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಇಸ್ರೋದ ಸಾಧನೆಯ ವಿವರಿಸುವ ಸಂಚಾರಿ ಬಸ್ ಮತ್ತು ತಾರಾಲಯ ವೀಕ್ಷಣೆಗೆ ಅವಕಾಶ ಇದ್ದು ಮೊದಲ ದಿನ ಕಾಲೇಜಿನ ಮತ್ತು ಸುತ್ತಲಿನ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಪ್ರಾತ್ಯಕ್ಷಿಕೆ ಮಾ, 15ರಂದು ಮುಂದುವರಿಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶವಿದೆ.

LEAVE A REPLY

Please enter your comment!
Please enter your name here