


ಬೆಳ್ತಂಗಡಿ :ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ (ಕೆ.ಜೆ.ಪಿ)ರಾಜ್ಯದ 224 ಕ್ಷೇತ್ರಗಳಲ್ಲಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕರ್ನಾಟಕ ಜನತಾ ಪಕ್ಷದ ರಾಜ್ಯಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದರು, ಅವರು ಇತ್ತೀಚೆಗೆ ಬೆಳ್ತಂಗಡಿ ಪತ್ರಕರ್ತರಿಗೆ ಮಾಹಿತಿ ನೀಡಿದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷವು ಸಂಕಲ್ಪ ಮಾಡಿದೆ. ರಾಜ್ಯ ರಾಜಕೀಯ ಆರಾಜಕತೆ ತಾಂಡವಾಡುತ್ತಿದೆ ಇಂತಹ ರಾಜಕೀಯ ಕಿತ್ತು ಹಾಕಿ ನ್ಯಾಯ ಸಮ್ಮತ ಆಡಳಿತಕ್ಕಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ, ಕರ್ನಾಟಕ ಜನತಾ ಪಕ್ಷದಿಂದ ಕೆಲವೇ ದಿನಗಳಲ್ಲಿ ಜನರ ನಿರೀಕ್ಷೆಗೆ ಮೀರಿದ ಸರ್ವರೂ ಮೆಚ್ಚುವಂತ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದು ಕರುನಾಡಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ, ಇವುಗಳ ಹೈಕಮಾಂಡ್ ಇರುವುದು ದೆಹಲಿಯಲ್ಲಿ ಸಿ ಎಂ. ದೆಹಲಿಗೆ ಹೋಗಿ ಅಲ್ಲಿ ಬಾಗಿಲನ್ನು ಕಾಯಬೇಕು. ಕನ್ನಡಿಗರ ಶ್ರೇಯಸ್ಸಿಗಾಗಿ ಮಾಡಿರುವ ವರದಿಯನ್ನು ಯಾವುದೇ ರಾಷ್ಟ್ರೀಯ ಪಕ್ಷಗಳು ಅನುಷ್ಟಾನಕ್ಕೆ ತರಲಿಲ್ಲ, ದೇಶಕ್ಕೆ ಅತೀ ಹೆಚ್ಚು ಜಿ ಎಸ್ ಟಿ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಆದರೆ ಅನುದಾನಗಳ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಎಂದು ಯೋಚಿಸಬೇಕಷ್ಟೆ, ರಾಜ್ಯದ ಅಭಿವೃದ್ಧಿಗಳಿಗೆ ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದರು. ಈ ಸಂದರ್ಭದಲ್ಲಿ ಕೆ ಜೆ ಪಿ ಪಕ್ಷದ ಕಾರ್ಯಾಧ್ಯಕ್ಷ ಶ್ರೀಧರ್ ಆಜಾದ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.