ಕಕ್ಕಿಂಜೆಯ ಚಿಬಿದ್ರೆಯ ವೈಂಡಿಂಗ್ ಅಂಗಡಿಯಿಂದ ಕಳವು: ರೂ.94 ಸಾವಿರದಷ್ಟು ಮೊತ್ತದ ವಸ್ತುಗಳ ಕಳ್ಳತನ

0

ಕಕ್ಕಿಂಜೆ: ಕಕ್ಕಿಂಜೆಯ ಜೆ ಕೆ ಎಲೆಕ್ಟ್ರಿಕಲ್ಸ್ ಮತ್ತು ವೈಂಡರ್ಸ್ ಅಂಗಡಿಯಲ್ಲಿ ಮಾ. 11ರಂದು ಕಳ್ಳತನ ನಡೆದಿದೆ.
ಕಕ್ಕಿಂಜೆಯ ಚಿಬಿದ್ರೆಯಲ್ಲಿರುವ ಅಂಗಡಿಯಿಂದ 5hp,6hp ಮತ್ತು 2hp ಬೋರ್ ವೆಲ್ ಮೋಟಾರ್ ಗಳನ್ನು ಕಳವುಗೈಯಲಾಗಿದೆ. ಇದರ ಜೊತೆ ಗುಜರಿ ಕಾಪರ್ ವಯರ್ ಗಳನ್ನು ಕಳ್ಳತನ ಮಾಡಲಾಗಿದೆ.


ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಅಂದಾಜು 94 ಸಾವಿರ ಮೊತ್ತದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ಮಾಲೀಕ ಜಯಾನಂದ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here