


ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಯ ಗ್ರಾಮದ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಅಗತ್ಯವಿದ್ದ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ನ ಹದಿನೈದನೇ ಹಣಕಾಸು ಯೋಜನೆಯಲ್ಲಿ ಮೀಸಲಿಟ್ಟ ಅನುದಾನದಿಂದ ಸೋಲಾರ್ ದೀಪ ಅಳವಡಿಕೆಯನ್ನು ಇತ್ತೀಚೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಭಾಷಿಣಿ .ಕೆ ರವರು ಉದ್ವಾಟಿಸಿದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷೆ ಶ್ರೀಮತಿ ಕುಸುಮ.ಎಸ್.ಬಂಗೇರ, ಸದಸ್ಯರಾದ ಅಬ್ದುಲ್ ಕರೀಮ್, ಹರೀಶ್ ಕುಮಾರ್, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಶ್ವೇತಾ ಕೆ ಸ್ಥಳೀಯರಾದ ಜನಾರ್ದನ ಗೌಡ, ಸಂಜೀವ ಬಂಗೇರ, ರತ್ನಾಕರ ಬಳ್ಳಿದಡ್ಡ, ಪ್ರಕಾಶ್ ಪೂಜಾರಿ ಮೇರ್ಲ, ಸುದರ್ಶನ್, ನಾರಾಯಣ ಪೂಜಾರಿ, ಸುಂದರ ಬಂಗೇರ ಬರಾಯ, ಅಶ್ವಿನಿ ಪ್ರಕಾಶ್ ಪೂಜಾರಿ, ಸದಾನಂದ ಪೂಜಾರಿ ಮೇರ್ಲ ಪದ್ಮನಾಭ ಪೂಜಾರಿ, ಜಗದೀಶ್ ಬರಾಯ, ಬೊಮ್ಮಣ್ಣ ಗೌಡ, ಉಮೇಶ್ ಗೌಡ, ಪ್ರವೀಣ್ ಗೌಡ ಉಪಸ್ಥಿತರಿದ್ದರು.