ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್

0

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಬಳಿಕ ಮದ್ದೂರಿನ ಗೆಜ್ಜಲಗೆರೆಯಲ್ಲಿ ಮಾ.12 ರಂದು ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ ವಿಧಾನ ಪರಿಷತ್ ಸದಸ್ಯ ಉಜಿರೆಯ ಪ್ರತಾಪಸಿಂಹ ನಾಯಕ್ ಮೋದಿಯವರಿಂದ ಬೇಷ್ ಎನಿಸಿಕೊಂಡಿದ್ದಾರೆ.

ಮದ್ದೂರಿನ ಗೆಜ್ಜಲಗೆರೆಯಲ್ಲಿ ಮಾ. 12 ರಂದು ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಭಾಷಣ ಮಾಡಿದರು. ಹೆಚ್ಚಾಗಿ ಎಲ್ಲಿಯೂ ಅವರ ಭಾಷಣವನ್ನು ಸ್ಥಳೀಯ ಭಾಷೆಗೆ ಭಾಷಾಂತರ ಮಾಡುವ ಪದ್ದತಿ ಇರುವುದಿಲ್ಲ. ಆದರೆ ಮಂಡ್ಯದಲ್ಲಿ ಭಾಷಾಂತರಿಸುವ ಅನಿವಾರ್ಯತೆ ಉಂಟಾಯಿತು. ಭಾಷಾಂತರಕ್ಕೆ ಆಯ್ಕೆ ಮಾಡಿದ್ದು ಎಂಎಲ್‌ಸಿ ಪ್ರತಾಪಸಿಂಹ ನಾಯಕ್‌ ಅವರನ್ನು ಈ ಹಿಂದೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೆಲ ಸಮಯದ ಹಿಂದೆ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಹಿಂದಿ ಭಾಷಣವನ್ನು ಸಮರ್ಥವಾಗಿ ಕನ್ನಡೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮೋದಿ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವ ಭಾಗ್ಯ ಅವರದ್ದಾಯಿತು.

ಸಭೆಯ ಬಳಿಕ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಪ್ರತಾಪಸಿಂಹ ನಾಯಕ್ ರವರ ಬೆನ್ನು ತಟ್ಟಿ ಕೆಲಕಾಲ ಮಾತುಕತೆ ನಡೆಸಿದರು.

p>

LEAVE A REPLY

Please enter your comment!
Please enter your name here