


ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳೂರು ಪುರ ಭವನದಲ್ಲಿ ನಡೆದ ಮಹಿಳಾ ಕಲೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಹಿಳಾ ಸಂಘಗಳಿಗೆ ತೃತೀಯ ಪ್ರಶಸ್ತಿ ದೊರಕಿದೆ.
ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಮಹಿಳಾ ವೃಂದ ಬೆಳ್ತಂಗಡಿಯ ಸದಸ್ಯರು ಸುಮಾರು 20 ನಿಮಿಷಗಳ ಅವಧಿಯಲ್ಲಿ ಸ್ಕಿಟ್, ನೃತ್ಯ, ಸಂಗೀತ ಸೇರಿದಂತೆ ಕಾರ್ಯಕ್ರಮ ನೀಡಿ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನದೊಂದಿಗೆ ಪ್ರಶಸ್ತಿ ತನ್ನದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಶಾಂತ ಬಂಗೇರ, ಬೆಳ್ತಂಗಡಿ ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್, ಬೆಳ್ತಂಗಡಿ ಮಹಿಳಾ ಸಂಘಗಳ ಪ್ರಮುಖರಾದ ಲೋಕೇಶ್ವರಿ ವಿನಯಚ್ಚಂದ್ರ, ಉಮಾ ಆರ್ ರಾವ್, ಪ್ರೀತಿ ಆರ್ ರಾವ್,ನೇತ್ರ ಅಶೋಕ್, ಉಷಾ, ವಿನೋದಿನಿ ರಾಮಪ್ಪ, ಯಶೋಧ, ಸೌಮ್ಯ, ಶಾರದಾ, ಲತಾ, ನಿಶಾ, ಅನುಷಾ ,ಚೈತ್ರಾ ಹಾಗೂ ಇತರರು ಉಪಸ್ಥಿತರಿದ್ದರು.