ಶಿರ್ಲಾಲು: ಹೆಂಡೇಲು ಬೈಲುನಲ್ಲಿ ವಿದ್ಯುತ್ ವಂಚಿತ 13 ಮನೆಗಳಿಗೆ ವಿದ್ಯುತ್ ಸಂಪರ್ಕದ ಉದ್ಘಾಟನೆ

0

ಶಿರ್ಲಾಲು : ಶಿರ್ಲಾಲು ಗ್ರಾಮದ ಹೆಂಡೇಲು ಬೈಲುನಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ವಂಚಿತರಾಗಿದ್ದ 13 ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಮಾ.10 ರಂದು ಶಾಸಕ ಹರೀಶ್ ಪೂಂಜ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಗೌಡ ವಹಿಸಿದ್ದರು.

ವಿದ್ಯುತ್ ಸಂಪರ್ಕಕ್ಕೆ ಸಹಕಾರ ನೀಡಿದ ಶಾಸಕ ಹರೀಶ್ ಪೂಂಜ ರವರನ್ನು ವಿದ್ಯುತ್ ಪಡೆದ 13 ಕುಟುಂಬಸ್ಥರು ಶಾಸಕರನ್ನು ಮೆರವಣಿಗೆ ಮೂಲಕ ಸ್ವಾಗತಿಸಿ, ಗೌರವಿಸಿದರು.

ವಿದ್ಯಾರ್ಥಿನಿ ರಶ್ಮಿತಾ, ಹಿರಿಯರಾದ ನಾರಾಯಣ ಗೌಡ ವಿದ್ಯುತ್ ಬಂದ ಸಂತೋಷದ ಅನಿಸಿಕೆ ಹಂಚಿ ಕೊಂಡರು.

ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ಶಿವಶಂಕರ, ಇತರ ಸಿಬ್ಬಂದಿಗಳು, ಗುತ್ತಿಗೆದಾರ ಪೆರಾಡಿ ಮಂಜುಶ್ರೀ ಎಲೆಕ್ಟ್ರಿಕಲ್ ನ ರವಿ ಪೆರಾಡಿ, ತಾ. ಪಂ. ಮಾಜಿ ಸದಸ್ಯ ಸುಧೀರ್ ಸುವರ್ಣ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯರು, ವಿದ್ಯುತ್ ಸಂಪರ್ಕ ಪಡೆದ 13 ಕುಟುಂಬಸ್ಥರಾದ ನಾರಾಯಣ ಗೌಡ ಹಂಡೇಲು, ಭುಜಂಗ ಗೌಡ, ಪದ್ಮಯ್ಯ ಗೌಡ, ರೇವತಿ ಧರ್ಣಪ್ಪ, ಹರೀಶ್ ಹಂಡೇಲು, ದೇವಪ್ಪ ಮಲೆಕುಡಿಯ, ಸಂಜೀವ ಮಲೆಕುಡಿಯ, ರಾಜು ಮಲೆಕುಡಿಯ, ಗಣೇಶ್ ಮಲೆಕುಡಿಯ, ಹರೀಶ್ ಬೈಲು, ಮೋನಪ್ಪ ಮಲೆಕುಡಿಯ, ಮನೋಜ್ ಮಲೆಕುಡಿಯ, ಕೃಷ್ಣಪ್ಪ ಮಲೆಕುಡಿಯ, ಹಾಗೂ ಊರವರು ಹಾಜರಿದ್ದರು.


LEAVE A REPLY

Please enter your comment!
Please enter your name here