ಬೆಳ್ತಂಗಡಿ : ಕರ್ನಾಟಕ ಸರಕಾರದ ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ತಾಲೂಕಿನ 80 ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೊಳವೆಬಾವಿ, ಪೈಪ್ ಲೈನ್, ಸ್ಪಿಂಕ್ಲರ್ ಜೆಟ್ ಹಾಗೂ ವಿದ್ಯುತ್ ಪೂರೈಕೆ ಸಹಿತ ಕೃಷಿಗೆ ಹಾಗೂ ಕುಡಿಯುವ ನೀರನ್ನು ಒದಗಿಸುವ ರೂ.4.00 ಕೋಟಿ ವೆಚ್ಚದ ಯೋಜನೆಗೆ ಶಾಸಕ ಹರೀಶ್ ಪೂಂಜ ಮಾ.10 ರಂದು ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು ವಾಸು ಕೆ. ರವರ ಜಾಗದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಾಸು ಕೆ ಪಡಿಬೆಟ್ಟು, ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಚಂದ್ರರಾಜ್ ನೂಜಿಲ, ಉಪಾಧ್ಯಕ್ಷ ಮೋಹನ ಕಂಚಿಂಜೆ, ಕಾರ್ಯದರ್ಶಿ ಪ್ರವೀಣ್ ಕೊಡಿಯೆಲು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಜಾನ್ ಪಿಂಟೋ, ಇತಿದೋರ್ ರೋಡ್ರಿಗಸ್, ಊರವರು ಫಲಾನುಭವಿಗಳು ಉಪಸ್ಥಿತರಿದ್ದರು.
p>