ಸೂಳಬೆಟ್ಟು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಳಬೆಟ್ಟು ಇದರ ಹೆಚ್ಚುವರಿ ಎರಡು ಕೊಠಡಿ ರಚನೆಗೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು.
ಶಾಸಕ ಹರೀಶ್ ಪೂಂಜರವರು ಅನುದಾನ ನೀಡಿದ್ದು ರೂ 27.80 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಆಗಲಿದೆ.
ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ ಉಪಾಧ್ಯಕ್ಷೆ ಬೇಬಿ ನಾರಾಯಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಮೋದ್ ಪೂಜಾರಿ, ಪ್ರಮುಖರಾದ ವಿಶ್ವನಾಥ ಹೊಳ್ಳ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ, ಶೋಭಾ ಕುಲಾಲ್, ಹರೀಶ್ ಶೆಟ್ಟಿ ಕಂಬಿರ್ತಿಲ್, ಗುತ್ತಿಗೆದಾರ ರಫೀಕ್ ಕಟ್ಟೆ, ಸಂಜೀವ ಶೆಟ್ಟಿ, ಸಂದೇಶ್ ಶೆಟ್ಟಿ, ದಿನೇಶ್, ಶಿಕ್ಷಕಿಯರಾದ ಮುಖ್ಯೋಪಾಧ್ಯಾಯರಾದ ಲೀನಾ ಮೋರಾಸ್, ಉಮೇಬಾ, ಸೌಮ್ಯ, ಶಕುಂತಳಾ ,ಸಮಿತಿ ಸದಸ್ಯ ಹರೀಶ್, ಬಿಸಿಯೂಟ ಸಿಬ್ಬಂದಿ ಸುಜಾತ, ಮಮತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನಗಳನ್ನು ಆರ್ಚಕ ಭಾರ್ಗವ ಭಟ್ ನೆರವೇರಿಸಿದರು.
p>