


ನಾಲ್ಕೂರು: ಈ ಭಾಗದ ಜನರ ಬಹುದಿನದ ಕನಸಾಗಿದ್ದ ಇಲ್ಲಿನ ಬೊಳ್ಳಾಜೆ- ಡೆಂಜೋಳಿ- ಗರ್ಡಾಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕ ಹರೀಶ್ ಪೂಂಜರವರು ರೂ 2.ಕೋಟಿ ಅನುದಾನ ನೀಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದಾರೆ.

ರಾಮನಗರದಲ್ಲಿ ಶಾಸಕ ಹರೀಶ್ ಪೂಂಜರವರು ಶಿಲಾನ್ಯಾಸ ನೇರವೇರಿಸಿ ಮಾತನಾಡಿ ಈ ಭಾಗದ ರಸ್ತೆ ತೀರಾ ಹದಗೆಟ್ಟಿದ್ದು ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದು ರೂ.2 ಕೋಟಿ ಅನುದಾನ ನೀಡಿದ್ದೇನೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬೆಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ವಿಶ್ವನಾಥ ಹೊಳ್ಳ, ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್, ಉಪಾಧ್ಯಕ್ಷೆ ಬೇಬಿನಾರಾಯಣ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ, ಶೋಭಾ, ಯಶೋಧರ ಶೆಟ್ಟಿ, ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಹರೀಶ್ ಕೋಟ್ಯಾನ್, ಅಶೋಕ್ ಸಫಲ್ಯ, ನಾಲ್ಕೂರು ಬೂತ್ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ನಂದೀಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಯೋಗೀಶ್ ಭಟ್, ಗರ್ಡಾಡಿ ಶಕ್ತಿ ಕೇಂದ್ರದ ಪ್ರಮುಖ್ ಯೋಗೀಶ್ ಆಚಾರ್ಯ,ಪ್ರಮುಖರಾದ ಹರೀಶ್ ಶೆಟ್ಟಿ ಕಂಬಿರ್ತಿಲ್, ಸತೀಶ್ ರೈ ಬಾರ್ದಡ್ಕ, ಸುರೇಶ್ ಪೂಜಾರಿ ಜೈಮಾತ, ದುಗ್ಗಯ ಪೂಜಾರಿ,ಸಂದೇಶ್ ಶೆಟ್ಟಿ, ಹಾ.ಉ.ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಹಾಗೂ ಊರವರು ಉಪಸ್ಥಿತರಿದ್ದರು