


ಕಲ್ಮಂಜ : ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್ ಎಂಬಲ್ಲಿ ಬೈಕ್ ಹಾಗೂ ಸ್ಕಾರ್ಪಿಯೊ ವಾಹನಗಳ ಮಧ್ಯೆ ಅಪಘಾತ ಉಂಟಾಗಿ ಬೈಕ್ ಸವಾರ ಕಲ್ಮಂಜ ಗ್ರಾಮದ ಏಲೆಂಗಿ ಮನೆ ಅಶೋಕ್ ಕುಮಾರ್ (55ವ) ರವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಾ. 7ರಂದು ಬೆಳಿಗ್ಗೆ ನಡೆದಿದೆ.

ಇವರು ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಎಂದಿನಂತೆ ಸಂಘಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
