ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ ಸಮಾರೋಪ

0

ಬೆಳ್ತಂಗಡಿ: ಸಮಾಜದ ಅಭಿವೃದ್ಧಿಗೆ ಯಾವುದರಿಂದ ಸಾಧ್ಯವೋ ಅದನ್ನು ಮಾಡಬೇಕು. ಐಕ್ಯತೆ ಇದ್ದಾಗ ಸಮಾಜದ ಅಭಿವೃದ್ಧಿ ಸಾಧ್ಯ ಬ್ರಾಹ್ಮಣ ಪದ್ಧತಿಗಳನ್ನು ಯತವತ್ತಾಗಿ ಆಚರಿಸುವ ಮೂಲಕ ಸಂಸ್ಕಾರ ಬೆಳೆಸಬೇಕು.ಅದರಲ್ಲು ಶಿಕ್ಷಣದೊಂದಿಗೆ ಜಪ ,ತಪ, ಹಿಂದಿನ ಶಾಸ್ತ್ರ ಪುರಾಣಗಳನ್ನು ಮಕ್ಕಳಿಗೆ ಕಳಿಸಿ ಅವರನ್ನು ಸಮಾಜದಲ್ಲಿ ಸಂಸ್ಕಾರಯುತ ಪ್ರಜೆಗಳನ್ನಾಗಿಸುವುದು ಹೆತ್ತವರ ಕರ್ತವ್ಯ ಎಂದು ಶ್ರೀ ಶೃಂಗೇರಿ ಶಾರದಾ ಪೀಠಾಧಿಶ್ವರ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರಿಗಳು ನುಡಿದರು.

ಅವರು ಮಾ.5 ರಂದು ಲಾಯಿಲ ಶ್ರಿ ಸುಬ್ರಹ್ಮಣ್ಯ ಸಭಾ ಭಾವನದಲ್ಲಿ ಎರಡು ದಿನ ನಡೆದ ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು

ಇದೇ ಸಂದರ್ಭದಲ್ಲಿ ಉಡುಪಿ ಚಿಟ್ಟಾಡಿ ಸರ್ವೋತ್ತಮ ರಾವ್ ರವರಿಗೆ ಸ್ಥಾನಿಕ ರತ್ನ ಪ್ರಶಸ್ತಿ ನೀಡಲಾಯಿತು.

ಉಡುಪಿ ಸ್ಥಾನಿನ ಸಮಾಜದ ನಿವೇಶಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಶ್ರಿಗಳು ಗೌರವಿಸಿದರು. ಶ್ರಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಯಕ್ರಮದಲ್ಲು ಸಮಾವೇಶದ ಪ್ರಮುಖರಾದ ಎನ್.ಕೆ. ಜಗನ್ನಿವಾಸ ರಾವ್ ಪುತ್ತೂರು, ಬೆಳ್ತಂಗಡಿ ಸ್ಥಾನಿಕ ಸಭಾದ ಪಿ. ರಾಧಾಕೃಷ್ಣ ರಾವ್ ಧರ್ಮಸ್ಥಳ,ಪಿ. ಲಕ್ಷ್ಮೀ ನಾರಾಯಣ ರಾವ್ ಧರ್ಮಸ್ಥಳ, ಎಂ ಎಸ್ ಅರುಣ್ ಕುಮಾರ್,ಮಮತಾ ಹರೀಶ್ ರಾವ್,ಎಂ ದೇವಾನಂದ ಭಟ್ ಬೆಳುವಾಯಿ,ಉದಯ ಬಾರ್ಕೂರು ಉಡುಪಿ,ಡಾ ವೈ ಸುದರ್ಶನ್ ರಾವ್ ಉಡುಪಿ,ಕೆ.ಮುಳಿಧರ ರಾವ್ ನಿಟ್ಟೆ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಂ. ದೇವಾನಂದ ಭಟ್ ಸ್ವಾಗತಿಸಿ .ಬಿ. ಕೆ.ಧನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here