ಬೆಳ್ತಂಗಡಿಯಲ್ಲಿ ಮಹಿಳಾ ವೃಂದದ ನೂತನ ಕಟ್ಟಡದ ಉದ್ಘಾಟನೆ

0

ಬೆಳ್ತಂಗಡಿ: ಐ.ಬಿ.ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಿಳಾ ವೃಂದದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.6 ರಂದು ನಡೆಯಿತು

ಶಾಸಕ ಹರೀಶ್ ಪೂಂಜ ನೂತನ ಕಟ್ಟಡ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.

ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಆಶಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಉಜಿರೆ ಉದ್ಯಮಿ ಮೋಹನ್ ಕುಮಾರ್, ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ನ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ, ಮಹಿಳಾ ವೃಂದದ ಸ್ಥಾಪಕ ಕಾರ್ಯದರ್ಶಿ ಶಶಿಕಲಾ ಪಿ. ರಾವ್, ಕಾರ್ಯದರ್ಶಿ ವೀಣಾವಿನೋದ್ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಹಿಳಾ ವೃಂದದ ಪೂರ್ವಾಧ್ಯಕ್ಷೆ ಜಯಶ್ರೀ ಪಿ ನಾಯಕ್ ಹಾಗೂ ನ.ಪಂ. ಸದಸ್ಯ ಶರತ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ಸಂಧ್ಯಾ ಪ್ರಾರ್ಥಿಸಿ, ರಶ್ಮಿ ಪಟವರ್ಧನ್ ಸ್ವಾಗತಿಸಿ, ಹೇಮಾವತಿ ಕಾರ್ಯಕ್ರಮ ನಿರೂಪಿಸಿ, ಉಮಾ ಪಿ ರಾವ್ ಪ್ರಾಸ್ತಾವಿಕ ಮಾತನಾಡಿದರು.

LEAVE A REPLY

Please enter your comment!
Please enter your name here