ನಾಳ : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮ ದೈವಗಳಾದ ಶ್ರೀ ಕೊಡಮಾಣಿತ್ತಾಯ ಮತ್ತು ಶ್ರೀ ಪಿಲಿಚಾಮುಂಡಿ ದೈವಗಳಿಗೆ ನೇಮೋತ್ಸವ ಮಾ.4 ರಂದು ಜರುಗಿತು.
ಪೂರ್ವಾಹ್ನ ನಾಳ ದೇವಸ್ಥಾನದ ದೈವಗಳ ಭಂಡಾರ ಮನೆಯಿಂದ ಭಂಡಾರ ಇಳಿದು ಮಡ್ತ್ಯಾರು ಗುಡ್ಡೆ ದೈವಸ್ಥಾನದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ನಡೆದು ರಾತ್ರಿ ದೈವಗಳಿಗೆ ಗಗ್ಗರ ಸೇವೆ ಜರುಗಿತು.
ನಾಳ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ರವರ ನೇತೃತ್ವದಲ್ಲಿ ವೈದಿಕ ವಿಧಿ- ವಿಧಾನಗಳಿಂದ ನೆರವೇರಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಸದಸ್ಯರಾದ ವಸಂತ ಮಜಲು, ಜನಾರ್ದನ ಪೂಜಾರಿ ಗೇರುಕಟ್ಟೆ, ಅಂಬಾ ಬಿ.ಆಳ್ವ ನಾಳ, ವಿಜಯ ಹೆಚ್ ಪ್ರಸಾದ್ ಕುಂಠಿನಿ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ ನಾಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ, ಜಾತ್ರೋತ್ಸವ ವಿವಿಧ ಸಮಿತಿ ಪದಾಧಿಕಾರಿಗಳು, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಊರ- ಪರಊರ ಭಕ್ತಾದಿಗಳು ಬಾಗವಹಿಸಿದ್ದರು.