


ಉಜಿರೆ: ಕಳೆದ 6 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಗ್ರಾಹಕರ ಪ್ರೀತಿ ವಿಶ್ವಾಸ,ನಂಬಿಕೆಯನ್ನು ಗಳಿಸಿ ಮುನ್ನಡೆಯುತ್ತಿರುವ ಇಮೇಜ್ ಮೊಬೈಲ್ಸ್ ನ ಮತ್ತೊಂದು ಸಂಸ್ಥೆ ಉಜಿರೆಯಲ್ಲಿ ಶುಭಾರಂಭಗೊಂಡಿದೆ.
ಉಜಿರೆ ಕಾಲೇಜು ರಸ್ತೆ ಎ.ಆರ್ ಟವರ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಇಮೇಜ್ ಮೊಬೈಲ್ಸ್ ನ ಉದ್ಘಾಟನೆಯನ್ನು ಇಮೇಜ್ ಗ್ರೂಪ್ಸ್ ನ ಸ್ಥಾಪಕರಾದ ಹಸೈನಾರ್ ಎನ್.ಕೆ ಯವರು ನೆರವೇರಿಸಿ ಶುಭ ಕೋರಿದರು.

ತೀರ್ಥಹಳ್ಳಿ ತಂಘಲ್ ಸಯ್ಯದ್ ಅಬೂಬಕ್ಕರ್ ಸಿದ್ದಿಕ್ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಎ.ಆರ್ ಟವರ್ ಮಾಲಕ ಅಬ್ದುಲ್ ರಹಮಾನ್, ಉಜಿರೆ ಅಮೃತ್ ಸಿಲ್ಕ್ ಮಾಲಕ ಪ್ರಶಾಂತ್ ಜೈನ್, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಉಜಿರೆ ಸುಪ್ರೀಮ್ ಲಾಡ್ಜ್ ನ ಯು.ಹೆಚ್ ಅಬೂಬಕ್ಕರ್, ಅನುಗ್ರಹ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ತಲ್ಹತ್ ಮತ್ತು ಅಶ್ರಫ್, ಪ್ಯಾಲೆಟ್ ಡಿಸೈನ್ ಮಣಿಪಾಲ್ ಮತ್ತು ಬೆಳ್ತಂಗಡಿಯ ರಫೀಕ್, ಎಂ.ಎನ್ ಕಂಪ್ಯೂಟರ್ ನ ಹೆರಾಲ್ಡ್ ಪಿಂಟೋ, ಶೃಂಗಾರ್ ಮಾಸ್ಟರ್ ಕಟ್ಸ್ ನ ಅಭಿಜಿತ್ ಭಂಡಾರಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಅನ್ಸಾರ್, ಅಜಾರ್,ಹರ್ಷದ್ ಆಗಮಿಸಿದ ಅಥಿತಿ ಗಣ್ಯರನ್ನು ಆದರದಿಂದ ಬರಮಾಡಿಕೊಂಡು ಸ್ವಾಗತಿಸಿ,ಸತ್ಕರಿಸಿದರು.