


ಶಿರ್ಲಾಲು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ,ಯುವವಾಹಿನಿ ಸಂಚಲನ ಸಮಿತಿ ವತಿಯಿಂದ 24ನೇ ವರ್ಷದ ಗುರುಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬ್ರಹ್ಮ ಬೈದೆರ್ಕಳ ಗರಡಿ ಶಿರ್ಲಾಲು ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ಪಾಲನೆ ವಹಿಸಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗು.ನಾ ಸೇ. ಸಂಘದ ಅಧ್ಯಕ್ಷರು, ಶಿರ್ಲಾಲು ಗರಡಿ ಆಡಳಿತ ಸಮಿತಿ ಗೌರವ ಅಧ್ಯಕ್ಷ ರಮಾನಂದ ಗುಡ್ಡಾಜೆ, ಶಿರ್ಲಾಲು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷ ಕುಶಾಲ ರಮೇಶ್ ,ಯುವವಾಹಿನಿ ಅಧ್ಯಕ್ಷ ಜಯ ಪೂಜಾರಿ,ಸಂಘದ ಕಾರ್ಯದರ್ಶಿ ನಾರಾಯಣ ಪೂಜಾರಿ ಕರಂಬಾರು ಉಪಸ್ಥಿತರಿದ್ದರು.
ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಹರೀಶ್ ಕಲ್ಲಾಜೆ ಸ್ವಾಗತಿಸಿದರು. ರಂಜಿತ್ ಅಜೀರೋಲಿ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ಶಾಂತಿ ಗುರುಪೂಜೆ ನೆರೆವೇರಿಸಿದರು. ಶಶಿಕಾಂತ್ ಕುಮಾರ್,ಜ್ಞಾನೇಶ್ ಕುಮಾರ್ ಯತೀಶ್ ಪೂಜಾರಿ,ವಿಜಯ್ ಕುಮಾರ್, ಶಿರ್ಲಾಲು ಪ್ರಕಾಶ್ ಕಟ್ರಬೈಲ್, ಸನತ್ ಕುಮಾರ್ ಸಹಕರಿಸಿದರು. ಸಂಘದ ನಿರ್ದೇಶಕರು, ಪದಾಧಿಕಾರಿಗಳು ಸರ್ವ ಸದಸ್ಯರು ಸಹಕರಿಸಿದರು. ಶ್ರೀಮತಿ ನಳಿನಿ ಇವರು ಧನ್ಯವಾದವಿತ್ತರು