


ಅಳದಂಗಡಿ ನೊಚ್ಚ ಮನೆಯ ದರ್ಬೆ ಪಲತ್ತಡ್ಕ ದಿ| ನಾರಾಯಣ ಶೆಟ್ಟಿ ಯವರ ಪತ್ನಿ ಲಕ್ಷ್ಮೀ ಎನ್ ಶೆಟ್ಟಿ (90ವ) ರವರು ವಯೋ ಸಹಜದಿಂದ ಮಾ.2 ರಂದು ಸ್ವಗೃಹದಲ್ಲಿ ನಿಧನರಾಧರು.
ಮೃತರು ಪ್ರಗತಿಪರ ಕೃಷಿಕರಾಗಿದ್ದು ಕೊಡುಗೈ ದಾನಿಯಾಗಿದ್ದರು. ಇವರು ಮಕ್ಕಳಾದ ಸುಲ್ಕೇರಿ ಮೊಗ್ರು ಪ್ರಾ.ಕೃ.ಪ.ಸ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪಿ. ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ, ಉದ್ಯಮಿ ಉದಯ್ ಶೆಟ್ಟಿ, ಪುತ್ರಿಯರಾದ ಶೋಭಾ, ಶುಭಾ ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ.