ಗೇರುಕಟ್ಟೆ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಪರೀಕ್ಷಾ ಪೂರ್ವ ಜಾಗೃತಿ’ ಕಾರ್ಯಾಗಾರ

0

ಗೇರುಕಟ್ಟೆ :ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಜೀವವಿಮಾ ನಿಗಮ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಫೆ.24 ರಂದು ಸರ್ಕಾರಿ ಪ್ರೌಢಶಾಲೆ ಗೇರುಕಟ್ಟೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ “ಪರೀಕ್ಷಾ ಪೂರ್ವ ಜಾಗೃತಿ ಕಾರ್ಯಾಗಾರ” ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲರಾದ ಶ್ರೀಮತಿ ಈಶ್ವರಿ ಕೆ. ವಹಿಸಿದ್ದರು. ಜೀವವಿಮಾ ನಿಗಮ ಬೆಳ್ತಂಗಡಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ರೋಟರಿ ಸದಸ್ಯರು ಉದಯಶಂಕರ ಅರಸಿನಮಕ್ಕಿ, ಇವರು 8,9,10ನೇ ತರಗತಿಯ 2021-22ನೇ ಸಾಲಿನ ಕಲಿಕೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜೀವ ವಿಮಾ ನಿಗಮದ ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ.ಪ.ಪೂ. ಕಾಲೇಜು ವಿಟ್ಲ ಹಾಗೂ ನರೇಂದ್ರ ಪ.ಪೂ.ಕಾಲೇಜು ಪುತ್ತೂರು ಇಲ್ಲಿಯ ವಿಶ್ರಾಂತ ಪ್ರಾಂಶುಪಾಲ ವಿಶ್ವೇಶ್ವರ ಭಟ್ ಉಂಡೆ ಮನೆ ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು.

ವಿಜ್ಞಾನ ಶಿಕ್ಷಕರಾದ ಶ್ರೀಮತಿ ಕಿಶೋರಿ, ಇವರು ಕಾರ್ಯಕ್ರಮ ನಿರೂಪಿಸಿ, ಆಂಗ್ಲಭಾಷಾ ಶಿಕ್ಷಕ ದಿನೇಶ್ ವಂದಿಸಿದರು. ಸಮಾಜ ಶಿಕ್ಷಕರಾದ ಶ್ರೀಮತಿ ಮಮತಾ ಅತಿಥಿಗಳನ್ನು ಸ್ವಾಗತಿಸಿ, ಕನ್ನಡ ಭಾಷಾ ಶಿಕ್ಷಕರಾದ ಶ್ರೀಮತಿ ಜ್ಯೋತಿ ಪೂಜಾರ್ತಿ ಇವರು ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದ ಈ ಕಾರ್ಯಕ್ರಮದ ಯಶಸ್ಸಿಗೆ ಗಣಿತ ಶಿಕ್ಷಕ ರಾಜೇಂದ್ರ ಕೃಷ್ಣ, ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಜೋಸ್ವಿನ್ ಅಮಿತಾ ಫೆರ್ನಾಂಡಿಸ್ ಹಾಗೂ ಶಿವಶಂಕರ್ ಕಛೇರಿ ಸಹಾಯಕರು ಸಹಕರಿಸಿದರು. ಅತಿಥಿಗಳ ಗೌರವ ಸಮರ್ಪಣೆಯ ಸ್ಮರಣಿಕೆಯನ್ನು ಯೋಗೀಶ್ ಸುವರ್ಣ, ಅಡ್ಡಕೊಡಂಗೆ , ಎಸ್.ಆರ್. ಶಾಮಿಯಾನ ಗೇರುಕಟ್ಟೆ ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here