


ಬೆಳಾಲು : ಅನ್ಸಾರಿಯ ಜುಮ್ಮಾ ಮಸೀದಿಯಲ್ಲಿ ಕಳೆದ 8 ವರ್ಷಗಳಿಂದ ತಂಗಳ್ ಸೇವೆ ಸಲ್ಲಿಸಿ ಕೇರಳಕ್ಕೆ ವರ್ಗಾವಣೆ ಗೊಂಡಿರುವ ಹಬೀಬುರ್ರಹ್ಮಾನ್ ರವರಿಗೆ ಬೀಳ್ಕೊಡುಗೆ ಸಮಾರಂಭ ಫೆ.24 ರಂದು ನಡೆಯಿತು. ಮಸೀದಿಯ ಅಧ್ಯಕ್ಷ ಆದಮ್ ಟಿ.ಎಚ್ ಮಾತಾಡಿ 8 ವರ್ಷ ಸೇವೆ ಮಾಡಿ ಬೆಳಾಲು ಮಸೀದಿಯ ಅಭಿವೃದ್ಧಿ ಮಾಡಲು ಸಹಕರಿಸಿದ್ದಾರೆ ಎಂದರು.
ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಪ್ ಮಾತಾಡಿ ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆ ಬೇಕು. ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು”ಎಂಬ ಈ ಮಾತುಗಳು ಜಮಾತ್ ಖತೀಬರಾದ ತಂಗಳ್ ರವರಿಗೆ ಅನ್ವಯಿಸುತ್ತದೆ ಎಂದರು.
ತಂಗಳ್ ರವರಿಗೆ ಎ.ಜೆ.ಎಮ್. ಜುಮ್ಮಾ ಮಸೀದಿಯ ಪರವಾಗಿ ವಿದಾಯ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಜಮಾತ್ ಕಮಿಟಿ ಸದಸ್ಯರು ಊರಿನ ಹಿರಿಯ ವ್ಯಕ್ತಿಗಳು, ಉಸ್ತಾದರು, ವಿದ್ಯಾರ್ಥಿಗಳು ಊರವರು ಭಾಗವಹಿಸಿದ್ದರು.