ತಣ್ಣೀರುಪಂತ : ಶ್ರೀ ಮಹಾಮ್ಮಾಯಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಮಹೋತ್ಸವ: ಧಾರ್ಮಿಕ ಸಭೆ, ಸನ್ಮಾನ

0

ತಣ್ಣೀರುಪಂತ : ಮರಾಠಿ ಜನಾಂಗೀಯ ನಾಯ್ಕರು ದೇವರ ಸೇವೆ, ಧಾರ್ಮಿಕತೆಯನ್ನು ಶ್ರದ್ಧೆ ಭಕ್ತಿಯಿಂದ ಉತ್ತೇಜಿಸುವ ಮುಗ್ಧ ಮಾನವ ಮರಾಠಿ ಸಮುದಾಯ ಸಮಾಜದಲ್ಲಿ ಶ್ರೇಷ್ಠರು. ಕುಲ ದೇವರಾದ ಶ್ರೀ ಮಹಮ್ಮಾಯಿ ಅಮ್ಮನವರು ಹಾಗೂ ಸ್ಥಳ ಸಾನಿಧ್ಯ ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಸೂರ್ಯನಾರಾಯಣ ಭಟ್ ಕಶೆಕೋಡಿ ರವರು ಫೆ.23ರಂದು ನಡೆದ ತಣ್ಣೀರುಪಂತ ಶ್ರೀ ಮಹಾಮ್ಮಾಯಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.


ನಮ್ಮ ರಕ್ಷಣೆ ಮತ್ತು ಸಮಾಜದ ರಕ್ಷಣೆಗಾಗಿ ತನ್ನ ಜೀವವನ್ನು ಮುಡಿಪಗಿಟ್ಟು ನಿಷ್ಠೆಯಿಂದ ಕರ್ತವ್ಯ ಮಾಡುವ ಶ್ರೇಯಸ್ಸು ಮರಾಠಿ ಸಮುದಾಯಕ್ಕೆ ಸಲ್ಲುತ್ತದೆ.ಆದ್ದರಿಂದ ಗೋಂದೋಲು ಪೂಜೆಯನ್ನು ಮರಾಠಿ ಸಮುದಾಯದವರು ಮುಗ್ಧ ಭಕ್ತಿಯಿಂದ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತದೆ ಎಂದು ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀದಾಮ ಮಾಣಿಲ ಇವರು ಆಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಎಸ್.ಕೆ.ಆರ್.ಡಿ.ಪಿ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ದುಗ್ಗಪ್ಪ ಗೌಡ ಪೊಸಂದೋಡಿ ದುಗ್ಗಪ್ಪ ಗೌಡ ಪೊಸಂದೋಡಿ, ಬೆಂಗಳೂರಿನ ಉದ್ಯಮಿ ಕೆ.ಎನ್.ಅತುಲ್ ಕುಮಾರ್, ಕರಾಯ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಕೊಲ್ಲಿ, ಹಲೇಜಿ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯಾಧ್ಯಕ್ಷ ಕೆ.ಎನ್.ಸುಧೀರ್ ಕುಮಾರ್ ಹಲೇಜಿ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಕೇಲ್ದಡ್ಕ, ಜಗದೀಶ್ ಮೈರ, ಪಜಿರಡ್ಕ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ತುಕರಾಮ್ ಸಾಲ್ಯಾನ್, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ದಾಸಪ್ಪ ಗೌಡ ಕೋಡ್ಯಡ್ಕ, ಮರಾಟಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ದುರ್ಗಾಪ್ರಸಾದ್ ಮಜಕಾರ್, ತಾಲೂಕು ಭಜನಾ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಶ್ರೀ ರಾಮ ಶಾಲೆ ವೇದಶಂಕರ ನಗರ ಉಪ್ಪಿನಂಗಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುನಿಲ್ ಅಣವು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯುವರಾಜ್ ಅನಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಡಂತ್ಯಾರು ವೇದಮೂರ್ತಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ, ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ್ ಪೊಸಂದೋಡಿ, ವಾಸ್ತು ಶಿಲ್ಪಿ ಪದ್ಮನಾಭ ಹಾಗೂ ಪ್ರತಿಷ್ಠಾ ಮಹೋತ್ಸವದಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು ಸ್ವಾಮೀಜಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ವತಿಯಿಂದ ಶಾಸಕ ಹರೀಶ್ ಪೂಂಜರಿಂದ ವೇದಮೂರ್ತಿ ಬ್ರಹ್ಮಶ್ರೀ ಗೋಪಾಲ ಕೃಷ್ಣ ತಂತ್ರಿಯವರು ಶಾಲು ಹೊದಿಸಿ ಫಲ-ಪುಷ್ಪ ನೀಡಿ ಗೌರವಿಸಿದರು.
ಅಪ್ಪೆನ ಪೊರ್ಲು ತುಳು ಭಕ್ತಿ ಸುಗಿಪು ಎಂಬ ತುಳು ಭಕ್ತಿಗೀತೆಯನ್ನು ವೇದಿಕೆಯಲ್ಲಿ ಸ್ವಾಮೀಜಿ ಅನಾವರಣಗೊಳಿಸಿದರು.
ರಾತ್ರಿ ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಇವರಿಂದ ಶ್ರೀ ದೇವಿ ಮಹಿಷಮರ್ದಿನಿ ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಕಾರ್ಯಾಧ್ಯಕ್ಷ ಪ್ರಭಾಕರ ಪೊಸಂದೋಡಿ ಸ್ವಾಗತಿಸಿ, ಮಂಜುಳಾ ಹಾಗೂ ಸುರೇಶ್ ಹೆಚ್.ಎಲ್.ಹಲೇಜಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಚಿದಾನಂದ ಆರ್ಜವಂ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here