ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವ ಪ್ರಾರಂಭ

0

ಬೆಳ್ತಂಗಡಿ : ಇಲ್ಲಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 13 ರಿಂದ ಪ್ರಾರಂಭಗೊಂಡು ಫೆ. 22 ರವರೆಗೆ ನಡೆಯಲಿದೆ.
ಫೆ. 13 ರಂದು ಬೆಳಿಗ್ಗೆ ಬೆಳ್ತಂಗಡಿ ರತ್ನತ್ರಯ ಜೈನ ತೀರ್ಥಕ್ಷೆತ್ರ ಸಮುಚ್ಚಯದ ಭ| ಶ್ರೀ ಶಾಂತಿನಾಥ ಸ್ವಾಮಿ, ಭ| ಶ್ರೀ ಅನಂತನಾಥ ಸ್ವಾಮಿ, ಚಂದ್ರನಾಥ ಸ್ವಾಮಿ, ಭ| ಶ್ರೀ ಪಾರ್ಶ್ವನಾಥ ಸ್ವಾಮಿ ದೇವರಿಗೆ ಕ್ಷೀರಾಭಿಷೇಕ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಹಾಗೂ ಬ್ರಹ್ಮ ದೇವರಿಗೆ ಮಹಾಪೂಜೆ ನಡೆಯಿತು.

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ, ಗೊನೆ ಮೂಹೂರ್ತ, ತೋರಣ ಮುಹೂರ್ತ, ನವಕಕಲಶ, ಧ್ವಜಾರೋಹಣ ಬಳಿಕ ಪ್ರಸನ್ನ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಜಯವರ್ಮರಾಜ ಬಳ್ಳಾಲ್ ಕೆಲ್ಲಗುತ್ತು ಮತ್ತು ಕುಟುಂಬಸ್ಥರು, ತಂತ್ರಿಗಳಾದ ನಂದ ಕುಮಾರ್ ಕೊಯ್ಯೂರು, ಅರ್ಚಕರು ಹಾಗೂ ಊರಿನ ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here