ಮಚ್ಚಿನ ಮಕ್ಕಳ ಯಕ್ಷಗಾನ ನಾಟ್ಯ ತರಬೇತಿಯು ಮಚ್ಚಿನ ಸಮುದಾಯ ಭವನದಲ್ಲಿ ಫೆ 12 ರಂದು ಉದ್ಘಾಟನೆಗೊಂಡಿತ್ತು. ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರಾದ ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಡಾ| ಕೆ ಯಾಮ್ ಶೆಟ್ಟಿ ಬಳ್ಳಮಂಜ, ರಾಧಾಕೃಷ್ಣ ಶೆಟ್ಟಿ ನೆತ್ತರ, ನಾಟ್ಯ ಶಿಕ್ಷಕ ದೇವಿಪ್ರಸಾದ್ ಗುರುವಾಯನಕೆರೆ, ಸಂಘಟಕ ಚಿತ್ತರಂಜನ್ ಕುರುಡಂಗೆ, ರೇಖಾ ಶೆಟ್ಟಿ, ಯತೀಶ್ ರೈ ಕೈಲಾ, ಹರ್ಷ ಬಳ್ಳಮಂಜ ಉಪಸ್ಥಿತರಿದ್ದರು. ರೇಖಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಹರ್ಷ ಬಳ್ಳಮಂಜ ಸ್ವಾಗತಿಸಿ, ಧನ್ಯವಾದವಿತ್ತರು.
p>