ಫೆ.12: ಜ್ಯೋತಿರಾಜ್ ಯಾನೆ ಕೋತಿರಾಜ್ ರಿಂದ ಗಡಾಯಿಕಲ್ಲು ಏರುವ ಸಾಹಸ

0

ಬೆಳ್ತಂಗಡಿ : ಚಿತ್ರದುರ್ಗದ ಕೋಟೆ ಮುಂಭಾಗಾದ ಜ್ಯೋತಿರಾಜ್ ಯಾನೆ ಕೋತಿರಾಜ್ ಮತ್ತು ಇತರ 8 ಮಂದಿ ತಾಲೂಕಿನ ಐತಿಹಾಸಿಕ ಗಡಾಯಿಕಲ್ಲು (ನರಸಿಂಹ ಗಡ) ಕೋಟೆಗೆ ಏರುವ ಸಾಹಸವನ್ನು ಫೆ.12 ರಂದು ಹಮ್ಮಿಕೊಂದಿದ್ದೇವೆ ಎಂದು ಜ್ಯೋತಿರಾಜ್ ಯಾನೆ ಕೋತಿರಾಜ್ ಹೇಳಿದರು.ಅವರು ಫೆ.11 ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಗಡಾಯಿಕಲ್ಲು ಏರುವ ಬಹುದಿನದ ಕನಸು ಈಗ ವನ್ಯ ಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಕೋಟೆ ಏರಲು ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು 1200 ಅಡಿ ಎತ್ತರದ ಈ ಬಂಡೆಯನ್ನು ಕೇವಲ ಕೈ ಗಳ ಸಹಾಯದಿಂದ ಏರಲಿದ್ದು ಸುರಕ್ಷತಾ ದೃಷ್ಟಿಯಿಂದ ವನ್ಯ ಜೀವಿ ವಿಭಾಗದ ನಿಯಮದಂತೆ ರೋಪ್ ಅಳವಡಿಸಲಾಗಿದೆ. ಚಂದ್ಕುರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಉತ್ತರ ಭಾಗದಿಂದ ಬೆಳಿಗ್ಗೆ 8 ಗಂಟೆಗೆ ಪ್ರಾರಂಭ ಮಾಡಲಾಗುವುದು. ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯರನ್ನು ಭೇಟಿ ನೀಡಿದ್ದು ಸಂಪೂರ್ಣ ಸಹಕಾರ ನೀಡಿದ್ದಾರೆ. ತಂಡದಲ್ಲಿ ನನ್ನೊಂದಿಗೆ ಚಿತ್ರದುರ್ಗದವರಾದ ಬಸವರಾಜ್, ರಾಜಶೇಖರ, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ, ಪವನ್ ಕುಮಾರ್ ಭಾಗವಹಿಸಲಿದ್ದಾರೆ.


ಹಲವಾರು ಪ್ರವಾಸಿ ಸ್ಥಳಗಳಲ್ಲಿ, ಶಿಖರಗಳಲ್ಲಿ ನದಿ, ಹಾಗೂ ಕೆರೆಗಳಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪಿದ ಮೃತ ದೇಹಗಳನ್ನು ಕಠಿಣ ಕಾರ್ಯಾಚರಣೆ ಮೂಲಕ ಈ ತಂಡದೊಂದಿಗೆ ಮಾಡಿರುತ್ತದೆ. ಇದು ಒಂದು ಕಲೆಯು, ಕ್ರೀಡೆ ಆಗಿದ್ದು ಚಿತ್ರದುರ್ಗದ ಕೋಟೆಗೆ ಬರುವ ಪ್ರವಾಸಿಗರಿಗೆ ಪ್ರದರ್ಶನ ನೀಡುತ್ತಾ ಅವರು ನೀಡುವ ಹಣದಿಂದ ನನ್ನೊಂದಿಗೆ ಏರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಹಾರ, ವಸತಿ ನೀಡಿ ಇವರು ರಾಷ್ಟ್ರೀಯ, ಅಂತರಾಷ್ಟ್ರೀಯ, ವಲಯ ರಾಜ್ಯ ಕ್ರೀಡಾ ಕೂಟಗಳಲ್ಲಿ ಪದಕ ಪಡೆದುಕೊಂಡಿದ್ದಾರೆ ಎಂದರು.

LEAVE A REPLY

Please enter your comment!
Please enter your name here