ಕಳಿಯ: ಶೇಷಗಿರಿ ಕೊಜಪ್ಪಾಡಿಯಲ್ಲಿ ನಿರ್ಮಿಸಿರುವ ನವೀಕೃತ ಶಿಲಾಮಯ ನಾಗಮಂಟಪದಲ್ಲಿ ಶ್ರೀ ವಾಸುಕೀ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನಾಗದರ್ಶನದ ಕಾರ್ಯಕ್ರಮದ ನಿಮಿತ್ತವಾಗಿ ನಾಗದೇವರ ಮೂರ್ತಿಯ ಹಾಗೂ ಹಸಿರುವಾಣಿ ಹೊರಕಾಣಿಕೆಯ ಭವ್ಯ ಮೆರವಣಿಗೆ ಸಿರಿಮಜಲು ಮೈದಾನದಿಂದ ಕ್ಷೇತ್ರಕ್ಕೆ ಫೆ.09 ರಂದು ನಡೆಯಿತು.
ಉದ್ಘಾಟನೆಯನ್ನು ಉದ್ಯಮಿ ಶೇಖರ ಶೆಟ್ಟಿ ಮನಸ್ವಿ ರತ್ನಗಿರಿ ನೇರವೇರಿಸಿ ಶುಭಕೋರಿದರು.
ಬೆಳಿಗ್ಗೆ ವಾಸ್ತು ಹೋಮ, ಸುದರ್ಶನ ಹೋಮ, ವಾಸ್ತು ಬಲಿ, ಬಿಂಬ ಶುದ್ದಿ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ನಾಟ್ಯ ವೈಭವ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಕೋಶಾಧಿಕಾರಿ ಜಯರಾಮ ಆಚಾರ್ಯ, ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ,ಪ್ರಮುಖರಾದ ವಸಂತ ಮಜಲು, ರಾಜೇಶ್ ಪೆಂರ್ಬುಡ, ಹೊರೆಕಾಣಿಕೆ ಸಮಿತಿ ಸಂಚಾಲಕ ಜನಾರ್ಧನ ಗೌಡ, ಜಯರಾಮ್ ಶೆಟ್ಟಿ, ವಿಜಯ ಗೌಡ ಕಳಿಯ ಹಾಗೂ ವಿವಿಧ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.