ನೆರಿಯ :ಗಂಡಿಬಾಗಿಲು ಹಾಗೂ ಈ ಪರಿಸರದ ಸರ್ವಧರ್ಮಿಯರ ಬಹುಕಾಲದ ಕನಸೊಂದು ಸೆಂಟ್ ಮೇರಿಸ್ ಶಿಲುಬೆಯ ಗುಡಿಯ ಮೂರು ದಿನಗಳ ಪೂಜಾ ವಿಧಿ ವಿಧಾನಗಳೊಂದಿಗೆ ಗಂಡಿಬಾಗಿಲು ಚರ್ಚ್ ನ ಧರ್ಮ ಗುರುಗಳಾದ ವಂ ಶಾಜಿ ಮಾತ್ಯು ನೇತೃತ್ವದಲ್ಲಿ ಧ್ವಜಾರೋಹಣ ದ ಮುಖಾಂತರ ಆರಂಭ ವಾದ ಪ್ರತಿಷ್ಟಾಪನ ವಿಧಿವಿಧಾನಗಳು ಫೆಬ್ರವರಿ 5ರಂದು ಬೆಳ್ತಂಗಡಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ವಂ. ಫಾ. ಲಾರೆನ್ಸ್ ಮುಕ್ಕುಯಿ ಇವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಭಕ್ತಾದಿಗಳಿಗೆ ಪ್ರಾರ್ಥನೆ ಗಾಗಿ ಮುಕ್ತಗೊಳಿಸಿದರು. ಪವಿತ್ರ ಶಿಲುಭೆಯ ಗುರುತುಗಳು ಒಂದು ಪ್ರದೇಶವನ್ನು ಎಲ್ಲಾ ಬಗೆಯ ಕೆಡಕು ಗಳಿಂದ ರಕ್ಷಿಸಲು ಸಹಕಾರಿ ಮತ್ತು ಭಕ್ತರು ಅದರ ಪಾವಿತ್ರ್ಯ ತೆ ಯನ್ನು ಕಾಪಾಡಿ ವ್ಯವಹರಿಸಬೇಕೆಂದು ಈ ಸಂದರ್ಭದಲ್ಲಿ ಸೂಚಿಸಿದರು.
ಗಂಡಿಬಾಗಿಲಿನ ಬಿನು ಪುದಿಯೇಡತ್ತ್ ಹಾಗೂ ಕೇರಳದ ಎರ್ಣಕುಳಂ ಕೊಚ್ಚಿ ಯ ಕೊಂಟ್ರಾಕ್ಟರ್ ಅರುಣ್ ಸೋಮನ್ ಇವರ ಸಾರಥ್ಯದಲ್ಲಿ ಇದರ ನಿರ್ಮಾಣ ವನ್ನು ಮಾಡಲಾಗಿದೆ. ಪೂರ್ವಿಕರ ಹರಕೆ ಯಂತೆ ಸ್ಕೊಟ್ ಜೋರ್ಜ್ ಸಂತ ಮರಿಯಮ್ಮ ನವರ ಸ್ವರೂಪವನ್ನು ಶ್ರೀ ಕುಟ್ಟಿಚನ್ ಪುದಿಯೇಡತ್ ಸಂತ ಸೇಬಾಸ್ಟಿನವರಸ್ವರೂಪವನ್ನು ಕುಟ್ಟಿಚ್ಚನ್ ಕುರಿಯಾಳಶೇರಿ ಸಂತ ಜೋಸೆಫ್ ರ ಸ್ವರೂಪ ವನ್ನು ಲಿಸ್ಸಿ ಬಾಬು ದೀಪ ಪೀಠ ಮತ್ತು ಹುಂಡಿಯನ್ನು ಕೊಡಮಾಡಿದರು. ಧರ್ಮಾಧ್ಯಕ್ಷರು ಬಿನು ಪುದಿಯೇಡತ್ತ್ ಮತ್ತು ಅರುಣ್ ಸೋಮನ್ ಇವರ ಕೊಡುಗೆಯನ್ನು ಶ್ಲಾಘೀಸಿ ಚರ್ಚ್ ನ ಪರವಾಗಿ ಅಭಿನಂದಿಸಿ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಧರ್ಮ ಪ್ರಾತ್ಯದ ವಿಕಾರ್ ಜೂಡಿಶಿಯಲ್ ವಿಕಾರ್ ವಂದನಿಯ ಕುರಿಯಾಕೋಸ್ ವೆಟ್ಟುವಯಿ, ಚಾನ್ಸ್ ಲರ್ ವಂದನಿಯ ಲಾರೆನ್ಸ್ ಪೂಣೊಲಿಲ್, ತೋಟ್ಟತಾಡಿಯ ವಂದನಿಯ ಮಜೋಸ್ ಪೂವತಿಂಕಲ್, ಫಾ/ ಜಿನ್ಸ್, ಫಾ/ಪುನ್ನತಾ ನತ್ತ್, ಫಾ ಸಿರಿಲ್ಚರ್ಚ್ ನ ಟ್ರಸ್ಟಿ ಗಳಾದ ಸೇಬಾಸ್ಟಿನ್ ಎಂ ಜೆ ಮಾತ್ಯು ಪಂದ ಮಾಕ್ಕಲ್, ಬೇಬಿ ಸಿ ಎ ಆಗಸ್ಟಿನ್ ಸಂಡೇ ಸ್ಕೂಲ್ ನ ಶಿಜು ಸಿ ವರ್ಗಿ ಸ್ ಇವರ ನೇತೃ ತ್ವದಲ್ಲಿ ಪಾಲನಾ ಸಮಿತಿ ಮತ್ತು ವಾರ್ಷಿಕ ಹಬ್ಬ ದ ಪ್ರಸಿದೆಂತಿ ಗಳ ಹಾಗೂ ಸರ್ವ ಸದಸ್ಯರ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.