ಓಶೋಕೈ ವಿದ್ಯಾಸಂಸ್ಥೆ ಹಾಗೂ ಚಾರಿಟೇಬಲ್ ಟ್ರಸ್ಟ್ ನಿಂದ ಉಜಿರೆಯ ಶಿಹನ್ ಅಬ್ದುಲ್ ರೆಹಮಾನ್ ಗೆ ನೊಬೆಲ್ ವಿಶ್ವ ದಾಖಲೆ

0

ಬೆಳ್ತಂಗಡಿ : ಓಶೋಕೈ ವಿದ್ಯಾಸಂಸ್ಥೆ ಹಾಗೂ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಓಶೋಕೈ ಇದರ 39ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದಂತಹ ವಿಶ್ವದ ಎರಡನೇ ಅತಿ ದೊಡ್ಡ ದಾಖಲೆಯದಂತಹ ನೊಬೆಲ್ ವಿಶ್ವ ದಾಖಲೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಧಿಕೃತ ಪ್ರಯತ್ನ ಮಾಡಿದಂತಹ ಶೋರಿನ್ ರಿಯೋ ಸಂಸ್ಥೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಶಿಹನ್ ಅಬ್ದುಲ್ ರೆಹಮಾನ್ ನೊಬೆಲ್ ವಿಶ್ವ ದಾಖಲೆಯನ್ನು ಮಾಡಿರುತ್ತಾರೆ. ಇವರು ಒಂದು ನಿಮಿಷದಲ್ಲಿ ಸುಮಾರು 146 ಕಿಕ್ ನ್ನು ಮಾಡುವ ಮೂಲಕ ನೊಬೆಲ್ ವಿಶ್ವ ದಾಖಲೆಯನ್ನು ಮಾಡಿರುತ್ತಾರೆ ಇವರು ಮೂಡುಬಿದ್ರೆಯ ರೆನ್ಸಿ ಮಹಮ್ಮದ್ ನದೀಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

ಹಾಗೆಯೇ ಇವರು 4ನೇ ಡ್ಯಾನ್ ಬ್ಲೇಕ್ ಬೆಲ್ಟ್ ಪದವಿಯನ್ನು ಹೊಂದಿದ್ದು ಹಲವು ಶಾಲಾ ಕಾಲೇಜುಗಳಲ್ಲಿ ಕರಾಟೆ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here