ಅಳದಂಗಡಿ: ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ

0

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಇಂದು ಚಾಲನೆ ದೊರೆತಿದ್ದು ಕ್ಷೇತ್ರಕ್ಕೆ ತಂತ್ರಿಗಳಾದ ಆಗಮ‌ಪ್ರವೀಣ ಪೋಳಲಿ ಕೋಡಿಮಜಲು ವೇದಬ್ರಹ್ಮ ಶ್ರೀ ವಿದ್ವಾನ್ ಕೆ.ಅನಂತಪದ್ಮನಾಭ ಉಪಾಧ್ಯಯರು ಹಾಗೂ ಋತ್ವಿಜರ ಆಗಮನವಾಗಿದೆ.

ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಸಿ, ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.

ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಹಸಿರುವಾಣಿ ಹೊರಕಾಣಿಕೆ ಸಮರ್ಪಣೆ ನೇರವೇರಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಉಗ್ರಾಣದ ಉದ್ಘಾಟನೆ ನೇರವೇರಿಸಿ ಶುಭಕೋರಿದರು,

ಹಸಿರುವಾಣಿ ಹೊರಕಾಣಿಕೆಯ ಉದ್ಘಾಟನೆಯನ್ನು ಪಿಲ್ಯ ಬೀಡು ಮನೆಯ ತಿರುಮಲೇಶ್ವರ ಪ್ರಸಾದ್ ನೇರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾದ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು,ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅಜಿಲ, ಪ್ರಧಾನ ಅರ್ಚಕ ಸೋಮನಾಥ ಮಯ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಅನಿಲ್ ಕೊಟ್ಟಾರಿ ಮಾಳಿಗೆ ಹಾಗೂ ಸರ್ವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾವರ, ಸುಲ್ಕೇರಿಮೊಗ್ರು, ಸುಲ್ಕೇರಿ, ಕುದ್ಯಾಡಿ, ಪಿಲ್ಯ, ಬಡಗಕಾರಂದೂರು, ಶಿರ್ಲಾಲು, ಕರಂಬಾರು, ಸವಣಾಲು, ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಗಳಿಂದ ಹೊರಕಾಣಿಕೆ ಸಮರ್ಪಣೆ ನಡೆಯಿತು.

ಅಳದಂಗಡಿಯಿಂದ ದೇವಸ್ಥಾನದವರೆಗೆ ಹಸಿರುವಾಣಿ ಹೊರಕಾಣಿಕೆಯ ವೈಭವದ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here