ಕಾಜೂರು ಮಖಾಂ ಶರೀಫ್ ಉರೂಸ್ ಉದ್ಘಾಟನೆ

0

ಬೆಳ್ತಂಗಡಿ; ಉರೂಸ್ ಎಂದರೆ ಆಧುನಿಕ ಶೈಲಿಯ ಶ್ವೇಚ್ಛಾರಕ್ಕಲ್ಲ ಧರ್ಮ ಕಾರ್ಯದ ಅನುಷ್ಠಾನಕ್ಕೆ. ಆದ್ದರಿಂದ ಅಲ್ಲಾಹನಿಗೆ ಇಷ್ಟವಿಲ್ಲದ ಒಂದೇ ಒಂದು ಕಾರ್ಯ ಕೂಡ ಇಲ್ಲಿ‌ ನಡೆಯಬಾರದು ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.
ದಕ್ಷಿಣ‌ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ, ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಸರ್ವ ಧರ್ಮೀಯರ ಸೌಹಾರ್ದ ಸಂಗಮ ಕ್ಷೇತ್ರವಾದ ಕಾಜೂರು ಮಖಾಂ ಶರೀಫ್ ನಲ್ಲಿ ಫೆ .3 ರಂದು ಉದ್ಘಾಟನೆಗೊಂಡ 2023 ನೇ ಉರೂಸ್ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಉರೂಸ್ ಉದ್ಘಾಟನೆಯನ್ನು ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಿದರು. ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಮಾಜಿ ಸದಸ್ಯರಾದ ನೂರುದ್ದೀನ್ ಸಾಲ್ಮರ ಮತ್ತು ನಝೀರ್ ಮಠ ಇವರು ಸಂದರ್ಭೋಚಿತವಾಗಿ ಮಾತನಾಡಿದರು.

ಕಿಲ್ಲೂರು ಜಮಾಅತ್ ನಿಂದ ಸಂದಲ್ ಮೆರವಣಿಗೆ ಆಗಮಿಸಿ ಬಳಿಕ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.

ವೇದಿಕೆಯಲ್ಲಿ ಕಾಜೂರು ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಎಸ್‌ಜೆಎಂ ಮುರ ರೇಂಜ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಎಸ್‌ಎಂಎ ಮುರ ರೇಂಜ್ ಅಧ್ಯಕ್ಷ ವಝೀರ್ ಮುಹಮ್ಮದ್ ಬಂಗಾಡಿ, ಉಜಿರೆ ರೇಂಜ್ ಅಧ್ಯಕ್ಷ ಮುಹ್ಯುದ್ದೀನ್ ಉಜಿರೆ, ಎಸ್‌ವೈಎಸ್ ಉಜಿರೆ ಸೆಂಟರ್ ಅಧ್ಯಕ್ಷ ರಶೀದ್ ಬಲಿಪಾಯ, ಮುಂಡಾಜೆ ಜಮಲುಲ್ಲೈಲಿ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಬಶೀರ್, ಪ್ರಮುಖರಾದ ಕೆ.ಯು ಮುಹಮ್ಮದ್, ಅಹಮ್ಮದ್ ಕಬೀರ್, ಶಾಹುಲ್ ಹಮೀದ್, ಮಾಜಿ ಅಧ್ಯಕ್ಷರುಗಳಾದ ಕೆ ಶೇಕಬ್ಬ ಕುಕ್ಕಾವು, ಬಿ.ಎ ಯೂಸುಫ್ ಶರೀಫ್, ಕೆ.ಯು ಮುಹಮ್ಮದ್ ಸಖಾಫಿ ಮತ್ತು ಉಮರ್ ಸಖಾಫಿ, ‌ಮುರ ಮಸ್ಜಿದ್ ಅಧ್ಯಕ್ಷ ಪಿ.ಯು ಆಲಿಕುಂಞಿ ಸಖಾಫಿ, ಮುಹಮ್ಮದ್ ಬಶೀರ್ ಮುಸ್ಲಿಯಾರ್ ಅರಸಿಕೆರೆ, ಎಂ.ಎ‌ ಕಾಸಿಂ ಮಲ್ಲಿಗೆಮನೆ, ಅಬೂಬಕ್ಕರ್ ಮಲ್ಲಿಗೆಮನೆ, ಬಿ.ಹೆಚ್ ಅಬೂಬಕ್ಕರ್, ಮುಹಮ್ಮದ್ ಪುತ್ತುಮೋನು, ಉನೈಸ್ ಸಖಾಫಿ ಮುಂಡಾಜೆ, ಮುಹಮ್ಮದ್ ಶರೀಫ್ ಬೆಳಾಲು, ಸತ್ತಾರ್ ಸಾಹೇಬ್ ಬಂಗಾಡಿ, ಜೆ.ಹೆಚ್ ಅಬ್ಬಾಸ್, ಹಮೀದ್‌ ಮಿಲನ್ ಲಾಯಿಲ, ಕಿಲ್ಲೂರು ಖತೀಬ್ ಬಿ.ಎಂ ಉಮರ್ ಅಶ್ರಫಿ, ಕಾಜೂರು ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ, ಸದರ್ ರಶೀದ್‌ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ‌ ಕಾರ್ಯಕ್ರಮ ನಿರೂಪಿಸಿದರು. ಕಿಲ್ಲೂರು ಮಸ್ಜಿದ್ ವಕ್ಫ್ ಆಡಳಿತಾಧಿಕಾರಿ ಮುಹಮ್ಮದ್ ರಫಿ ವಂದನಾರ್ಪನೆಗೈದರು.

LEAVE A REPLY

Please enter your comment!
Please enter your name here