ಬೆಳಾಲು : ಮಾಯ ಸ್ಟ್ರೈಕರ್ಸ್ ಮಾಯ ವತಿಯಿಂದ ಜ.29 ರಂದು ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಹಿರಿಯ ಮತ್ತು ಕಿರಿಯ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.
ಈ ಪಂದ್ಯಾಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಸಂಜೀವ ಗೌಡ ಕನಿಕಿಲ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಾಯಾ ಶಾಲಾ ಶಿಕ್ಷಕ ಯೋಗೀಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಚ್. ಪದ್ಮ ಗೌಡ ಭಾಗವಹಿಸಿ ಕ್ರೀಡಾಂಗಣ ಉದ್ಘಾಟನೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಸಿ ಆರ್ ಪಿ ರಾಜೇಶ್ ಆಚಾರ್ಯ ಸವಣಲು, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯನ್ ಮಾಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಪಿಲತಡಿ, ರುಕ್ಮಯ ಗೌಡ ಪರಾರಿ, ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪಗೌಡ ಬೆರ್ಕೆಜಾಲು ಸಂತೋಷ್ ಕುದ್ದಂಟೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ವಿಟ್ಟಲ್ ಎಂ, ಉದ್ಯಮಿ ಜಯಣ್ಣ ಗೌಡ ವಿನಂದೇಳು, ನಾರಾಯಣಗೌಡ ಎಳ್ಳುಗದ್ದೆ, ವಸಂತ ಆಚಾರ್ಯ ಆಲಡ್ಕ, ರಾಧಾಕೃಷ್ಣ ಮಾಯ, ರಮಿತ್ ಗೌಡ ಅಧ್ಯಕ್ಷರು ಶ್ರೀರಾಮ ಶಾಖೆ ಬೆಳಾಲು, ಕೃಷ್ಣ ಬೆಳಾಲು ಅಧ್ಯಕ್ಷರು ಆಟೋ ಚಾಲಕರ ಸಂಘ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟದ ಹಿರಿಯ ವಿಭಾಗದ ಪ್ರಥಮ ಸ್ಥಾನ ಬದನಾಜೆ ಶಾಲೆ, ದ್ವಿತೀಯ ಕನ್ಯಾಡಿ ಫ್ರೆಂಡ್ಸ್ , ತೃತೀಯ ಮಾಯಾ ಸ್ಟ್ರೈಕರ್ಸ್ ಮಾಯ, ಚತುರ್ಥ ಮಾಲಾಡಿ ಶಾಲೆ ಪಡೆದರೆ ಕಿರಿಯ ವಿಭಾಗದಲ್ಲಿ ಪ್ರಥಮ ಮಾಲಾಡಿ ಶಾಲೆ, ದ್ವಿತೀಯ ಮಾಯ ಸ್ಟ್ರೈಕರ್ಸ್ ಮಾಯ, ತೃತೀಯ ಜನಾರ್ದನ ಶಾಲೆ ಉಜಿರೆ, ಚತುರ್ಥ ಡಿಪಿ ಫ್ರೆಂಡ್ಸ್ ದೊಂಪದ ಪಲ್ಕೆ ಪಡೆಯಿತು.
ಕಾರ್ಯಕ್ರಮದ ಸ್ವಾಗತವನ್ನು ಮಾಧವ ಗೌಡ ಓಣಾಜೆ, ಬಹುಮಾನ ವಿತರಣೆ ಪಟ್ಟಿಯನ್ನು ಸಂತೋಷ್ ಕುದ್ದಂಟೆ ಹಾಗೂ ಧನ್ಯವಾದವನ್ನು ಯೋಗೀಶ್ ಅಧ್ಯಾಪಕರು ನಿರ್ವಹಿಸಿ ನಿರೂಪಣೆಯನ್ನು ಧರ್ಮೇಂದ್ರ ಕುಮಾರ್ ಬೆಳಾಲು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾಯ ಸ್ಟ್ರೈಕರ್ಸ್ ಮಾಯಾದ ಸಂಚಾಲಕರು ಶಿಲ್ಪಿ ಶಶಿಧರಾಚಾರ್ಯ ಹಾಗೂ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾಯಾ ಸ್ಟ್ರೈಕರ್ಸ್ ಮಾಯ ತಂಡಕ್ಕೆ ತರಬೇತಿ ನೀಡಿದ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರರಾದ ಧರ್ಮೇಂದ್ರ ಕುಮಾರ್ ಬೆಳಾಲು ಇವರನ್ನು ಸನ್ಮಾನಿಸಲಾಯಿತು.