ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.6 ರಿಂದ ಬೆಂಗಳೂರಿನಲ್ಲಿ ಮತ್ತೆ ಗ್ರಾ.ಪಂ. ನೌಕರರ ಹೋರಾಟ- ಗ್ರಾ.ಪಂ.ರಾಜ್ಯ ಒಕ್ಕೂಟದಿಂದಲೂ ಬೆಂಬಲ

0

ಬೆಂಗಳೂರು: ಫೆಬ್ರವರಿ 6 ರಿಂದ ಗ್ರಾಮ ಪಂಚಾಯತ್ ಗಳಲ್ಲಿ ಜನರ ಕೆಲಸಗಳು ಅಡ್ಡಿಯಾಗುವ ಸಾಧ್ಯತೆಯಿದೆ. ಯಾಕಂದ್ರೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್ ಡಿ ಪಿ ಆರ್)ದವರು ಮತ್ತೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ
ಬೇಡಿಕೆ ಈಡೇರಿಸದೇ ಸರ್ಕಾರದಿಂದ ವಿಳಂಬ ನೀತಿ

ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರನ್ನಾಗಿ ಮಾಡುವುದು, ಸೇವಾ ನಿಯಮಾವಳಿ ಮತ್ತುವೇತನ ಶ್ರೇಣಿ ರೂಪಿಸುವುದು, ಬೇರೇ ಬೇರೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗ್ರಾಮ ಪಂಚಾಯತ್ ನೌಕರರಿಗೆ ಭಡ್ತಿ ನೀಡುವುದು, ಅನುಮೋದನೆ ಬಾಕಿಯಿರುವ ನೌಕರಿಗೆ ವಯಸ್ಸಿನ ವಯೋಮಿತಿಮತ್ತು ವಿದ್ಯಾರ್ಹತೆ ಪರಿಗಣಿಸದೇ ಸೇವಾ ಹಿರಿತನದ ಆಧಾರದ ಮೇಲೆ ಅನುಮೋದನೇ ನೀಡಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸೇರಿ ಪ್ರತಿಭಟನೆ ಕೈಗೊಂಡಿದ್ದರು. ಚಳಿಗಾಲದ ಅಧಿವೇಶನದ ವೇಳೆ ಸೇರಿದ್ದ ಸಾವಿರಾರು ನೌಕರರನ್ನು ನೋಡಿ ಮುಖ್ಯ ಬಸವರಾಜ್ ಬೊಮ್ಮಾಯಿಯವರ ಸೂಚನೆಯಂತೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳರವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಈ ವೇಳೆ ಹದಿನೈದು ದಿನಗಳೊಳಗೆ ನಮಗೆ ಸೂಕ್ತ ಸ್ಪಂಧನೆ ನೀಡಬೇಕೆಂದು ಒತ್ತಾಯಿಸಿ ನೌಕರರು ಪ್ರತಿಭಟನೆ ಹಿಂಪೆಡಿದಿದ್ದರು.
ಆದರೆ ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಈ ನೌಕರರ ಬೇಡಿಕೆಗಳ ಕುರಿತಾಗಿ ಯಾವುದೇ ಮುತುವರ್ಜಿ ವಹಿಸಿಲ್ಲ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಮತ್ತೆ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಫೆಬ್ರವರಿ 6ರಿಂದ ಅನಿರ್ಧಿಷ್ಟಾವಧಿಯವರೆಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ.


ಹೋರಾಟಕ್ಕೆ ಗ್ರಾಮ ಪಂಚಾಯತಿ ಒಕ್ಕೂಟದಿಂದ ಬೆಂಬಲ
ಸ್ಥಳಿಯಾಡಳಿತ ಜನಪ್ರತಿನಿಧಿಗಳ ಬೆಂಬಲದಿಂದ ಹೋರಾಟ ಕುತೂಹಲ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ನೇತೃತ್ವದಲ್ಲಿ ಗ್ರಾಮ್ ಪಂಚಾಯ್ತಿ ನೌಕರರ ವಿವಿಧ ಬೇಡಿಕೆ ಈಡೇರಿಕೆ ಬಗ್ಗೆ ಫೆಬ್ರವರಿ 6 ರಿಂದ ನಡೆಯುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಹೋರಾಟಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದಿಂದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಲ್ಲಿ ಸತೀಶ್ ರವರು ಸಂಪೂರ್ಣ ಬೆಂಬಲವನ್ನು ಘೋಷಣೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಸದ್ರಿ ಹೋರಾಟದಲ್ಲಿ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರು ಕೂಡ ಗ್ರಾಮ ಪಂಚಾಯಿತಿ ನೌಕರರಿಗೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಬೆಂಬಲ ನೀಡಿರುವುದರಿಂದ ಫ್ರೀಡಂ ಪಾರ್ಕಿನ ಹೋರಾಟ ಭಾರೀ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here