ಬೆಳ್ತಂಗಡಿ : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಅವರಿಗೆ ಶಾಸಕರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಬೆಳ್ತಂಗಡಿ ಪೊಲೀಸ್ ಠಾಣಾ ಎದುರು ಚಲೋ ಪ್ರತಿಭಟನೆ ಜ.30 ರಂದು ನಡೆಯಿತು.
ಮೂಲನಿವಾಸಿ ಮಲೆಕುಡಿಯ ಸಂಘದ ನೇತೃತ್ವದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬೆಳ್ತಂಗಡಿ ಪೊಲೀಸ್ ಠಾಣಾ ಎದುರು ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಗಂಗಾಧರ ಗೌಡ, ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಗೌಡ,
ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ , ಕಾಮಿ೯ಕ ಮುಖಂಡ ಬಿ ಎಂ ಭಟ್ , ಶೇಖರ್ ಕುಕ್ಕೇಡಿ , ಅಭಿನಂದನ್ , ಅಬ್ದುಲ್ ರಹಿಮಾನ್ ಪಡ್ಪು, ಶಿವಕುಮಾರ್, ಮನೋಹರ ಇಳಂತಿಲ , ಮೆಹಬೂಬ್, ಜಯಾನಂದ ಪಿಲಿಕಲ, ಭರತ್ ಕುಮಾರ್, ಬೇಬಿ ಸುವಣ೯, ಜಯರಾಮ್ ಅಲಂಗಾರು ಮೊದಲಾದವರು ಉಪಸ್ಥಿತರಿದ್ದು, ನಂತರ ಮನವಿ ಸಲ್ಲಿಸಲಾಯಿತು.