ಪಟ್ರಮೆ: ಅನಾರು ಶಾಲೆಯಲ್ಲಿ ಕಲಿಕಾ ಹಬ್ಬ

0

ಪಟ್ರಮೆ :ಮಕ್ಕಳ ಕಲಿಕಾ ಚೇತರಿಕೆಗಾಗಿ ಕರ್ನಾಟಕ ಶಿಕ್ಷಣ ಇಲಾಖೆ ಆಯೋಜಿಸಿದ ಕಲಿಕಾ ಹಬ್ಬದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕ್ಲಸ್ಟರ್ ವ್ಯಾಪ್ತಿಯ ಕಿರಿಯ, ಹಿರಿಯ, ಪ್ರೌಢ ಶಾಲೆಗಳ ಕಲಿಕಾ ಹಬ್ಬವು ಪಟ್ರಮೆ ಗ್ರಾಮದ ಅನಾರು ಶಾಲೆಯಲ್ಲಿ ಜ.30 ರಂದು ಸಂಭ್ರಮದಿಂದ ಉದ್ಘಾಟನೆಗೊಂಡಿತು.‌
ಬೆಳಿಗ್ಗೆ ಕೊಕ್ಕಡ ಕ್ಲಸ್ಟರ್ ನ ವಿವಿಧ ಶಾಲೆಗಳ ಮಕ್ಕಳ ಹುಲಿವೇಶ, ಗೊಂಬೆಕುಣಿತ ಮೊದಲಾದ ವೈವಿಧ್ಯತೆಗಳೊಡಗೂಡಿ ಅನಾರು ದೇವಸ್ಥಾನದ ಬಳಿಯಿಂದ ಅನಾರು ಆರೋಗ್ಯ ಉಪಕೇಂದ್ರದ ತನಕ ಆಕರ್ಷಕ ಮೆರವಣಿಗೆ ನಡೆದು ನಂತರ ಸಭಾಕಾರ್ಯಕ್ರಮ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಧನಂಜಯ ಸಭಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಸಮನ್ವಯಾಧಿಕಾರಿ ಶಂಭುಶಂಕರ್, ಮೋಹನ್, ಸಿಆರ್ ಪಿ ವಿಲ್ಫ್ರೆಡ್ ಪಿಂಟೋ, ಕಲಿಕಾ ಹಬ್ಬದ ಉಸ್ತುವಾರಿ ಕೊಕ್ಕಡ ಹೈಸ್ಕೂಲ್ ಮುಖ್ಯ ಶಿಕ್ಷಕ ಪ್ರಭಾಕರ್ ಇಲಾಖಾ ವತಿಯಿಂದ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊರೊನಾ ಅವಧಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಿದ್ದು, ಕಲಿಕೆ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಈ ಯೋಜನೆ ರೂಪಿಸಿದೆ, ಇದನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ನಾವು ವ್ಯವಸ್ಥೆಗೊಳಿಸುತ್ತಿದ್ದೇವೆ ಎಂದರು. ಶ್ಯಾಮರಾಜ್ ಮಾತನಾಡಿ, ಕಲಿಕಾ ಹಬ್ಬ ಎಂಬ ಕಲ್ಪನೆಯೇ ಅದ್ಭುತವಾಗಿದೆ. ಇದು ಪ್ರತೀವರ್ಷವೂ ಮತ್ತಷ್ಟು ಹೊಸತನಗಳೊಂದಿಗೆ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸಿದರು. ಅತಿಥಿಗಳೆಲ್ಲರಿಗೂ ಅನಾರು ಶಾಲಾ ವತಿಯಿಂದ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.

ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಶ್ಯಾಮರಾಜ್, ಗ್ರಾ.ಪಂ. ಸದಸ್ಯೆ ಶ್ರೀಮತಿ ಗಿರಿಜ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಿತೇಶ್ ಪುತ್ರನ್ ಉಪಸ್ಥಿತರಿದ್ದರು.


ಸಿಆರ್ ಪಿ ವಿಲ್ಫ್ರೆಡ್ ಪಿಂಟೋ ರವರು ಸ್ವಾಗತಿಸಿದರು. ಉಪ್ಪಾರುಪಲ್ಕೆ ಶಾಲಾ ಶಿಕ್ಷಕ ದಾಮೋದರ್ ಕಾರ್ಯಕ್ರಮ ನಿರೂಪಿಸಿದರು. ಅನಾರು ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here