ಧರ್ಮಸ್ಥಳ: ದೇಶದಲ್ಲಿ ಎಲ್ಲಾ ಕಡೆಯೂ ಸಂಭ್ರಮದಿಂದ ಜ.26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಆದರೆ ತನು ಸ್ಪಂದಿಸದೆ ಮನ ಸ್ಪಂದಿಸುವವರು ಮಾತ್ರ ತಮ್ಮ ಮನೆಗಳಲ್ಲಿ ಕುಳಿತು ಗಣರಾಜ್ಯೋತ್ಸವದ ಕುರಿತು ಆಚರಣೆ ಹಾಗಿರಬಹುದು ಹೀಗಿರಬಹುದು ಎಂದು ಕನಸು ಕಾಣುತ್ತಿರಬಹುದು. ಹೀಗಾಗಿ ಅಂತಹವರ ಮನೆಗೆ ತೆರಳಿ ನಿಜವಾದ ಅರ್ಥದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುವ ತನು ಸ್ಪಂದಿಸದವರ ಮನ ಸ್ಪಂದಿಸುವ ತುಡಿತ ಐದು ಈ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮದ ದೊಂಡೊಲೆಯ ಭಾಗ್ಯಶ್ರೀ ಇವರ ಮನೆಯಲ್ಲಿ ನಡೆಯಿತು.
ಕು| ಭಾಗ್ಯಶ್ರೀ ಇವರು ಚಿತ್ರಕಲೆ ಹಾಗೂ ಕ್ರಾಫ್ಟ್ ಗಳಲ್ಲಿ ಎತ್ತಿದ ಕೈ. ಕುಳಿತಲ್ಲಿಯೇ ಹಲವು ಚಿತ್ರ ಹಾಗೂ ಬಣ್ಣ ಬಣ್ಣದ ಕಾಗದಗಳಲ್ಲಿ ವಿವಿಧ ಬಣ್ಣದ ಚಿತ್ತಾರಗಳನ್ನು ಮೂಡಿಸಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ ಇಲ್ಲಿನ ಕೆಲವು ವಿದ್ಯಾರ್ಥಿಗಳು ಹಾಗೂ ಒಂದಷ್ಟು ಶಿಕ್ಷಕರು ಭಾಗ್ಯ ಶ್ರೀ ಅವರ ಮನೆಗೆ ತೆರಳಿ ಅವರ ಚಿತ್ರಕಲೆ ಹಾಗೂ ಕ್ರಾಫ್ಟ್ ಗೆ ಬೇಕಾದ ವಸ್ತುಗಳನ್ನು ಒದಗಿಸಿದರು. ಹಲವಾರು ತನ್ನ ಕನಸುಗಳನ್ನು ಬಿಚ್ಚಿಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಕನಸಿಗೆ ಬಣ್ಣ ಹಚ್ಚುತ್ತೇವೆ ಎಂಬ ಭರವಸೆಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಹಲವಾರು ಪ್ರಶಂಸೆಗಳು ಮೂಡಿಬಂದಿವೆ. ಈ ಕಾರ್ಯಕ್ರಮವನ್ನು ಮೆಚ್ಚಿ ಶಾಲೆಯ ಪೋಷಕರು ಕೂಡ ಕಾರ್ಯಕ್ರಮಕ್ಕೆ ಜೊತೆಯಾಗಿದ್ದಾರೆ.